ತುಮಕೂರು: ಕಲ್ಪತರು ನಾಡಿನಲ್ಲಿ ದುರಂತ ಒಂದು ನಡೆದಿದ್ದು, ನಗರದಲ್ಲಿ ನಿನ್ನೆ ಅಕ್ಕಪಕ್ಕದ ಮನೆಯವರ ಕಿರುಕುಳ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಂದೇ ಕುಟುಂಬದ ಈದು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಸೆಲ್ಫಿ ವೀಡಿಯೋ ರೆಕಾರ್ಡ್ ಮಾಡಲಾಗಿದ್ದು, ತಮ್ಮ ಸಾವಿಗೆ ಕಾರಣವನ್ನು ಮನ ಮಿಡಿಯುವಂತೆ ಬಿಚ್ಚಿಟ್ಟಿದ್ದಾರೆ.
ತುಮಕೂರು ಪಟ್ಟಣಸದ ಸದಾಶಿವನಗರದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮನೆ ಯಜಮಾನ ಗರೀಬ್ ಸಾವ್, ಪತ್ನಿ ಸುಮಯಾ, ಮಕ್ಕಳಾದ ಹಾಜೀರಾ, ಮೊಹಮ್ಮದ್ ಶುಭಾನ್ ಹಾಗೂ ಮಹ್ಮದ್ ಮುನೀರ್ ಎಂಬುದಾಗಿ ತಿಳಿದು ಬಂದಿದೆ.