ಕುಕನೂರು : ಕಾಲು ಜಾರಿ ಕೆರೆಗೆ ಬಿದ್ದು ಹದಿನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಹರಿಶಂಕರ ಬಂಡಿ ಗ್ರಾಮದಲ್ಲಿ ನಡೆದಿದೆ.
ಶಿವನಂದಯ್ಯ ಶಂಕ್ರಯ್ಯ ಕಲ್ಮಠ (14) ಮೃತ ಬಾಲಕ. ಶಾಲೆ ಮುಗಿಸಿಕೊಂಡು ಮನೆಗೆ ಬಂದ ಬಾಲಕ ಸುಮಾರು ಸಂಜೆ 4:50ಕ್ಕೆ ಬಯಲು ಶೌಚಾಲಯಕ್ಕೆ ಕೆರೆ ಕಡೆಗೆ ಹೋದಾಗ ಈ ಘಟನೆ ನಡೆದಿದೆ. ಅವನ ಮನೆಯಲ್ಲಿ ತಂದೆ ತಾಯಿ ಕೆಲಸ ಮಾಡುತ್ತಿದ್ದು, ಅತ್ತ ಗಮನ ಹರಿಸಿಲ್ಲ, ಸ್ಥಳೀಯರ ಪ್ರಕಾರ, ಮೃತ ಬಾಲಕ ಶಿವನಂದಯ್ಯ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಅವರ ಮನೆಯಲ್ಲಿ ಮೃತ ಬಾಲಕ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಷಯ ತಿಳಿದ ಕುಕನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತಿಯ ನಿರ್ಲಕ್ಷ್ಯ…!!
ಕುಕನೂರು ತಾಲೂಕಿನ ಬಳಗೇರಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಹರಿಶಂಕರಬಂಡಿ ಗ್ರಾಮವು, ಈ ಗ್ರಾಮವೂ ಸಂಪೂರ್ಣ ಬಂಡೆ ಕಲ್ಲಿನ ಮೇಲೆ ನಿರ್ಮಾಣವಾಗಿದ್ದು, ಒಂದು ಕಡೆಯಲ್ಲಿ ಮನೆಗಳು ನಿರ್ಮಿಸಿಕೊಂಡರೆ ಇನ್ನೋಂದು ಕಡೆಯಲ್ಲಿ ಕೆರೆ ಇದೆ. ವಾಸಿಸುವ ಮನೆಗಳಿಂದ 100 ಮೀಟರ್ ಅಂತರದಲ್ಲಿ ಈ ಕೆರೆ ಇದೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ತಂತಿ ಬೇಲಿ ಅಥವಾ ರಕ್ಷಣಾ ಕವಚವನ್ನು ಅಳವಡಿಸಿಲ್ಲ. ಇದು ಗ್ರಾಮ ಪಂಚಾಯತಿಯ ಅಥವಾ ಸಂಬಂಧಪಟ್ಟ ಇಲಾಖಾಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಬಾಲಕನ ಸಾವಿಗೆ ಪರೊಕ್ಷವಾಗಿ ಇವರುಗಳೇ ಕಾರಣವೇಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಆದರೆ, ಇದರ ಬಗ್ಗೆ ಗಮನ ಹರಿಸದ ಕಾರಣ ಈ ಬಾಲಕ ಬಲಿಯಾಗುವಂತಾಗಿದೆ ಎಂದು ಆರೋಪಿಸಿದರು. ಈಗಲಾದರೂ ಗ್ರಾಮ ಪಂಚಾಯತ್ ತಾಲೂಕಾಡಳಿತ ಮೇಲೆ ಸೂಕ್ತ ಕ್ರಮ ಕೈಗೊಂಡು, ಕೆರೆಯ ಸುತ್ತಲೂ ತಂತಿ ಬೇಲಿಯನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಮೃತನಾದ ಶಿವನಂದಯ್ಯ ಶಂಕ್ರಯ್ಯ ಕಲ್ಮಠ (14) ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.