ಯಲಬುರ್ಗಾ : ಚಿಕ್ಕಮಗಳೂರಿನ ಯುವ ವಕೀಲರ ಪ್ರೀತಮ್ ಮೇಲೆ ಆದ ಪೊಲೀಸ ದೌರ್ಜನ್ಯವನ್ನು ಯಲಬುರ್ಗಾ ಇಂದು ತಾಲೂಕು ವಕೀಲರ ಸಂಘ ತೀವ್ರವಾಗಿ ಖಂಡಿಸಿ, ಪ್ರತಿಭಟನೆ ಮಾಡಿದೆ. ಒಂದು ದಿನ ಕೋರ್ಟ್ ಕಲಾಪದಿಂದ ದೂರ ಉಳಿದು ಸಾಂಕೇತಿಕವಾಗಿ ಬೆಂಬಲವನ್ನು ಸೂಚಿಸಲಾಯಿತು.
ಅಲ್ಲದೆ ಸಂಬಂಧಪಟ್ಟ ಪೋಲೀಸರ ವಿರುದ್ಧ ತುರ್ತು ಕ್ರಮ ಕೈಗೊಂಡು, ತಕ್ಷಣ ಅಂತಹ ಪೊಲೀಸರನ್ನು ಮತ್ತು ಠಾಣಾ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾ ಮಾಡಿ ತಪ್ಪಿತ್ತಸ್ತರನ್ನು ಅರೆಸ್ಟ್ ಮಾಡಬೇಕು. ನೊಂದ ವಕೀಲರಿಗೆ ನ್ಯಾಯವನ್ನು ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ ಆದಷ್ಟು ಬೇಗ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ಕೂಡ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಕಾಯ್ದೆಯನ್ನು ಜಾರಿಗೆ ತರದೆ ಇದ್ದರೇ, ರಾಜ್ಯದ್ಯಂತ ವಕೀಲರ ತೀವ್ರವಾದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಯಲಬುರ್ಗಾ ತಾಲೂಕು ವಕೀಲರ ಸಂಘವು ಸರಕಾರಕ್ಕೆ ಅಗ್ರಹಿಸಿದ್ದಾರೆ.
ವಕೀಲರ ಸಂಘದ ಅಧ್ಯಕ್ಷರಾದ ಪಿ ಎಸ್ ಬೇಲೇರಿ. ಉಪಾಧ್ಯಕ್ಷರಾದ ಎಚ್ ಎಚ್ ಹಿರೇಮನಿ. ಜೆಂಟಿ ಕಾರ್ಯದರ್ಶಿ ಎ ಎಂ ಪಾಟೀಲ್. ಖಜಾಂಚಿ ಕೆ ಆರ್ ಬಟಿಗೇರಿ. ಹಿರಿಯ ವಕೀಲರಾದ ಬಿ ಎಂ ಶಿರೂರ್. ಸಿ ಎಸ್ ಬನ್ನಪ್ಪಗೌಡ. ಎಂ ಎಸ್ ಪಾಟೀಲ್ ಎಸ್ ಎನ್ ಶ್ಯಾಗೋಟಿ.ಬಿ ಎಚ್ ಪೊಲೀಸ್ ಪಾಟೀಲ್. ಮಾಜಿ ಪ್ರಧಾನ ಕಾರ್ಯದರ್ಶಿ ಜಿ ಕೆ ಲಾಳಗೊಂಡರ. ದಾದು ಎಲಿಗಾರ್. ಶರಣಯ್ಯ ಶಶಿ ಮಠ. ನಾಗರಾಜ್ ಹವಾಲ್ದಾರ್. ಹಸನ್ ಸಾಬ್ ನದಾಫ್. ಡಿ ಎಚ್ ನದಾಫ್. ಶಿವನಗೌಡ ಪಾಟೀಲ್. ಅಂಬರೀಶ್ ಹೆಚ್. ಇನ್ನೂ ಅನೇಕ ಜನರು ವಕೀಲರು ಉಪಸ್ಥಿತರಿದ್ದರು.