ಗದಗ : ಜಿಲ್ಲೆಯ ನರೇಗಲ್ ಹೋಬಳಿಯ ಪತ್ರಿಕಾ ವರದಿಗಾರ ನಿಂಗಪ್ಪ ಮಡಿವಾಳರ (43) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅನಾರೋಗ್ಯ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಮೃತರು ಅನೇಕ ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಆರಂಭದಲ್ಲಿ ಬೇರೆ, ಬೇರೆ ಪ್ರಾದೇಶಿಕ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು. ಉತ್ತರಪ್ರಭಾ ಪತ್ರಿಕೆಯು ಆರಂಭವಾದ ದಿನಗಳಿಂದ ಇಲ್ಲಿಯವರೆಗೂ ಒಂದೇ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರಿಗೆ ಮೂವರು ಮಕ್ಕಳಿದ್ದಾರೆ. ಒಂದು ಗಂಡು, ಎರಡು ಹೆಣ್ಣು. ಈಚೆಗೆ ಅವರ ಪತ್ನಿ ಮೂರನೆ ಮಗುವಿಗೆ ಜನ್ಮ ನೀಡಿದ್ದಾಳೆ. ಅಂದಾಜು ಒಂದು ತಿಂಗಳಷ್ಟೇ ಆಗಿದೆ. ಮನೆಯಲ್ಲಿ ಹಾಸಿಗೆ ಹಿಡಿದಿರುವ ವೃದ್ದ ತಾಯಿ, ಓರ್ವ ಅಣ್ಣ ಹಾಗೂ ಇಬ್ಬರೂ ಅಕ್ಕಂದಿರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.