BIG NEWS : ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : 10 ಕೋಟಿ ದಂಡ, 12 ವರ್ಷ ಜೈಲು..!!

You are currently viewing BIG NEWS : ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : 10 ಕೋಟಿ ದಂಡ, 12 ವರ್ಷ ಜೈಲು..!!

ಬೆಳಗಾವಿ : ಸಾರ್ವಜನಿಕ ಸೇವೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದವರ ಆಸ್ತಿ ಜಪ್ತಿ ಹಾಗೂ ಗರಿಷ್ಠ 10 ಕೋಟಿ ರೂ.ವರೆಗೆ ದಂಡ ಮತ್ತು 12 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವ ಕಠಿಣ ನಿಯಮಗಳನ್ನು ಒಳಗೊಂಡ ಕರ್ನಾಟಕ ಸಾರ್ವಜನಿಕ ಪರೀಕ್ಷೆ ವಿಧೇಯಕ-2023 ಅನ್ನು ನಿನ್ನೆ (ಬುಧವಾರ) ಸದನದಲ್ಲಿ ಮಂಡಿಸಲಾಯಿತು.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 BREAKING : ಬೆಳ್ಳಂ ಬೆಳಿಗ್ಗೆಯೇ ಲೋಕಾಯುಕ್ತರ ದಾಳಿ : ಗಂಗಾವತಿಯಲ್ಲಿ ಇಂಜಿನಿಯರ್ ಗೆ ಶಾಕ್!! 

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 BIG NEWS : ಭಾವಿ ಶಿಕ್ಷಕರಿಗೆ ಇಲ್ಲಿದೆ ಬಂಪರ್ ಸುದ್ದಿ..!!

ಮುಖ್ಯಮಂತ್ರಿಗಳ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ವಿಧೇಯಕ ಮಂಡಿಸಿದರು. ಪಿಎಸ್‌ಐ ನೇಮಕಾತಿ, ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿ ಸೇರಿದಂತೆ ಹಲವು ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಬ್ಲೂಟೂತ್ ಬಳಕೆ, ಒಎಂಆ‌ರ್ ತಿದ್ದುಪಡಿ ಮೂಲಕ ಪರೀಕ್ಷಾ ಅಕ್ರಮ ನಡೆಸುವುದು, ನೇಮಕಾತಿಗೆ ಲಂಚ ನೀಡಿ ಭ್ರಷ್ಟಾಚಾರ ನಡೆಸುತ್ತಿರುವುದು ಹೊರಬಂದ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದ್ದು, ಇಂತಹದ್ದೊಂದು ಕಠಿಣ ನಿಯಮ ಗಳನ್ನು ಒಳಗೊಂಡ ಮಹತ್ವದ ವಿಧೇಯಕವನ್ನು ನಿನ್ನೆ ಮಂಡಿಸಲಾಗಿದೆ.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 GOOD NEWS : ಬಂಪರ್ ಆಫರ್ : ಈ ಮಕ್ಕಳಿಗೆ ಶುಭ ಸುದ್ದಿ..!!

ಅದು ಅಲ್ಲದೇ ಯಾವುದೇ ಅಭ್ಯರ್ಥಿ ಪರೀಕ್ಷಾ ಅಕ್ರಮದಲ್ಲಿ ತೊಡಗಿದರೆ 5 ವರ್ಷ ವರೆಗೆ ಜೈಲು ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸುವ, ದಂಡ ಪಾವತಿಸದ ವರಿಗೆ ಇನ್ನೂ 15 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಬಹುದು. ಅದೇ ರೀತಿ ಪರೀಕ್ಷಾ ಕಾರ್ಯ ಹೊಂದಿರುವ ಅಥವಾ ಹೊಂದಿರದ ಯಾವುದೇ ವ್ಯಕ್ತಿಯು ಪರೀಕ್ಷಾ ಅಕ್ರಮ, ಒಳಸಂಚಿನಲ್ಲಿ ತೊಡಗಿದರೆ, ಕನಿಷ್ಠ 8 ವರ್ಷಗಳಿಂದ 12 ವರ್ಷ ಜೈಲು ಶಿಕ್ಷೆ, 15 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ ಗರಿಷ್ಠ 2 ಕೋಟಿ ರೂ. ವರೆಗೆ ದಂಡ ವಿಧಿಸಲಾಗುವುದು.

Leave a Reply

error: Content is protected !!