ಕುಕನೂರು : ಪಟ್ಟಣ ಬಸ್ ನಿಲ್ದಾಣದ ಹತ್ತಿರದ ಚಂದ್ರಹಾಸ ಹೋಟೆಲ್ ಪಕ್ಕದಲ್ಲಿರುವ ರಾಜ್ ಸೆಲ್ ವರ್ಲ್ಡನಲ್ಲಿ ಶನಿವಾರ ತಡರಾತ್ರಿ ಕಳ್ಳತವಾಗಿದೆ.
ಪಟ್ಟಣದ ರಮೀಜ್ ರಾಜಾಸಾಬ ಗುಡಿಹಿಂದಲ್ ಎಂಬುವರ ಮೋಬೈಲ್ ಶಾಪ್ ಕಳ್ಳತನವಾಗಿದ್ದು. ಶಾಪ್ ಹಿಂದುಗಡೆಯಿ0ದ ಶಾಪ್ ಶೀಟ್‌ನ್ನು ಕೊರೆದು ಒಳ ಹೋಗಿದ್ದಾರೆ. ಶಾಪ್‌ನಲ್ಲಿದ್ದ (ಎರಡು ಲಕ್ಷರೂ) ಬೆಲೆ ಬಾಳುವು ಸುಮಾರು 15ಕ್ಕೂ ಹೆಚ್ಚು ಮೋಬೈಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ಹಾಗೂ ಹತ್ತು ಸಾವಿರ ರೂಪಾಯಿಗಳ ಹಣವನ್ನು ದೋಚಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಶಾಪ್ ಮಾಲಿಕರು ಪೋಲಿಸ್‌ರಿಗೆ ದೂರು ನೀಡಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಸ್ಥಳ ಪರಿಶೀಲನೆಯನ್ನು ನೆಡೆಸುದ್ದಾರೆ.
ಸ್ಥಳದಲ್ಲಿ ಸೇರಿದ್ದ ನೂರಾರು ಜನರು ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಳ್ಳತನ ಬಗ್ಗೆ ಕಳವಳ ವ್ಯಕ್ತಡಿಸಿದರು.