LOCAL BIG BREAKING : ರಸ್ತೆ ಅಪಘಾತ : ಬೈಕ್ ಸವಾರ ಸಾವು..!, ಈ ಸಾವಿಗೆ ಕಾರಣ ಯಾರು..?

You are currently viewing LOCAL BIG BREAKING : ರಸ್ತೆ ಅಪಘಾತ : ಬೈಕ್ ಸವಾರ ಸಾವು..!, ಈ ಸಾವಿಗೆ ಕಾರಣ ಯಾರು..?

ವರದಿ : ಚಂದ್ರು ಆರ್ ಭಾನಾಪುರ 

ಕುಕನೂರು : KSRTC ಬಸ್ ಗೆ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಕುಕನೂರಿನಲ್ಲಿ ನಡೆದಿದೆ.

ಕುಕನೂರು ಪಟ್ಟಣದ ಬಸ್ ಡಿಪೋ ಹತ್ತಿರ ನಿನ್ನೆ ಸಂಜೆ 4:20 ಗಂಟೆಗೆ ಬೈಕ್ ಸವಾರ ಕುಕನೂರು ಕಡೆ ಹೊರಟಿದ್ದಾಗ, ಇದೇ ವೇಳೆ ಎದುರುಗಡೆಯಿಂದ ಕುಕನೂರಿನಿಂದ ಬಸ್ ಡಿಪೋ ಒಳಗಡೆ ಹೋಗುತ್ತಿರುವಾಗ ತಿರುವಿನಲ್ಲಿ ಬಸ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳಿಗೆ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದ ಗಾಯಾಳು ಸುಮಾರು 6:15ಗಂಟೆಗೆ ಮೃತಪಟ್ಟಿದ್ದಾನೆ ಎಂದು ಅಧಿಕೃತವಾಗಿ ಮಾಹಿತಿ ತಿಳಿದು ಬಂದಿದೆ.

ಮೃತ ನಿರುಪಾದಿ ಮುದಿಯಪ್ಪ ಟೆಂಗುಂಟಿ (17 ವರ್ಷ) ಎಂದು ಗುರುತಿಸಲಾಗಿದೆ. ಈತನು ಯಲಬುರ್ಗಾ ತಾಲೂಕಿನ ಗದಗೇರಿ ಗ್ರಾಮದ ನಿವಾಸಿಯಾಗಿದ್ದನು ಎಂದು ಮಾಹಿತಿ ಇದೆ. ಈತನು ಕುಕನೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಈ ಘಟನೆ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈಗಾಗಲೇ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಈತನ ಸಾವಿಗೆ ಕಾರಣ ಯಾರು?

ಗುದ್ನೆಪ್ಪನ ಮಠದಿಂದ ಕುಕನೂರು ಕಡೆ ಹೋಗುವಾಗ ಎಡ ಭಾಗದಲ್ಲಿ ಹಾಗೂ ಕುಕನೂರು ಕಡೆಯಿಂದ ಗುದ್ನೆಪ್ಪನ ಮಠ ಕಡೆಗೆ ಬರುವಾಗ ಬಲ ಭಾಗದಲ್ಲಿ KSRTC (ಕಲ್ಯಾಣ ಕರ್ನಾಟಕ ರಸ್ತೆ ಸಾರಿ ನಿಗಮ) (ಕೊಪ್ಪಳ ವಿಭಾಗ-ಕುಕನೂರು ಘಟಕ) ಬಸ್ ಡಿಪೋ ಇದ್ದು, ಜೊತೆಗೆ ತಾಲೂಕ ಆಡಳಿತ-ತಹಶೀಲ್ದಾರ್ ಕಾರ್ಯಾಲಯ ಕೂಡ ಬಸ್ ಡಿಪೋ ಪಕ್ಕದಲ್ಲಿ ಇದೆ. ಈ ರಸ್ತೆಯಲ್ಲಿ ಹೆಚ್ಚಾಗಿ ಜನಸಂದಣಿ ಹಾಗೂ ವಾಹನಗಳು ಓಡಾಡುವುದರಿಂದ, ಈ ಬಸ್ ಡಿಪೋ ಎದುರುಗಡೆ ಇರುವ ಮುಖ್ಯ ರಸ್ತೆಗೆ ಯಾವುದೇ “STOP” ಸಿಗ್ನಲ್ ಇಲ್ಲ, ಸ್ಪೀಡ್ ಲಿಮಿಟ್ ಬೋರ್ಡ್, ರೋಡ್ ಬ್ರೇಕರ್” ಕೂಡ ಇಲ್ಲದಿರುವುದು ವಿಪರ್ಯಾಸವೇ ಸರಿ.

ಈ ಹಿಂದೆ ಇದೇ ಸ್ಥಳದಲ್ಲಿ ಇಂಥ ಘಟನೆಗಳು ತುಂಬಾನೇ ನಡೆದಿವೆ ಎಂದು ಅಲ್ಲಿನ ಸಾರ್ವಜನಿಕರು ಹೇಳಿದ್ದಾರೆ. ಇದರ ಜೊತೆಗೆ ಬಸ್ ಡಿಪೋದ ಎಡ ಭಾಗ ಹಾಗೂ ಬಲ ಭಾಗದಲ್ಲಿ ಸಾಕಷ್ಟು ಗಿಡಗಂಟಿಗಳು ಬೆಳೆದಿರುವುದರಿಂದ, ಬಸ್‌ಗಳು ಡಿಪೋದಿಂದ ಹೊರಗಡೆ ಬಸ್‌ ಬರುವಾಗ ರಸ್ತೆಯಲ್ಲಿ ಓಡಾಡುವಂಥ ವಾಹನಗಳಿಗೆ ಅಥವಾ ವಾಹನ ಸವಾರರಿಗೆ ಯಾವುದೇ ರೀತಿ ಕಾಣುವುದಿಲ್ಲ, ಹೀಗಾಗಿ ಕೆಲವು ಇಂತಹ ಘಟನೆಗಳು ಈ ಕಾರಣಕ್ಕೂ ನಡೆಯಲೂಬಹುದು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಘಟನೆಯ ಬಗ್ಗೆ ಅಲ್ಲಿ ನೋಡಿದಂತ ಪ್ರತ್ಯಕ್ಷದರ್ಶಿಗಳ ಹೇಳಿಕೆ, “ಬೈಕ್ ಸವಾರನು ಸ್ವಲ್ಪಮಟ್ಟಿಗೆ ವೇಗವಾಗಿ ಬೈಕ್ ಚಲಾಯಿಸುತ್ತಿದ್ದು, ಇದೇ ವೇಳೆಗೆ ಕುಕುನೂರು ಕಡೆಯಿಂದ ಬಸ್ ಡಿಪೋ ಒಳಗಡೆ ಕುಕುನೂರು ಕೊಪ್ಪಳ ಕುಕುನೂರು ಬೋರ್ಡ್ ಇರುವ KSRTC ಬಸ್ ಬರುತ್ತಿತ್ತು, ಈ ವೇಳೆ ಈ ಬಸ್ಸು ಡಿಪೋ ಒಳಗಡೆ ಹೋಗುವ ಸಂದರ್ಭದಲ್ಲಿ ಬೈಕ್ ಸವಾರ ಏಕಾಏಕಿ ಬ್ರೇಕ್ ಹಾಕಿದ್ದು, ಬೈಕ್ ರಭಸವಾಗಿ ರಸ್ತೆಗೆ ತಾಕಿ, ಬೈಕ್ ಬಸ್ಸಿನ ಮುಂದಿನ ಎರಡು ಚಕ್ರದ ಕೆಳಗಡೆ ಹೋಗಿದ್ದು, ಮೃತ ನಿರುಪಾದಿ ಬಸ್ಸಿನ ಮುಂದಿನ ಬಲದ ಗಾಲಿಯ ಪಕ್ಕದಲ್ಲಿ ಬಿದ್ದಿರುವುದು ಕಂಡು ಬಂದಿತ್ತು, ಹತ್ತಿರ ಹೋಗಿ ನೋಡಿದಾಗ ಬೈಕ್ ಸವಾರ ಪ್ರಜ್ಞಹೀನ ಸ್ಥಿತಿಯಲ್ಲಿ ಬಿದ್ದಿರೋದು ಕಂಡು ಬಂತು, ತತಕ್ಷಣ ಇದನ್ನು ಕಂಡ ಬಸ್ ಡ್ರೈವರ್ ಇಳಿದು ಬಸ್ ಡಿಪೋ ಒಳಗಡೆ ಹೋದನು, ಬಳಿಕ ನಾವು ತುರ್ತು ವಾಹನಕ್ಕೆ ಕರೆ ಮಾಡಲಾಯಿತು. ಈ ವೇಳೆ, ಈ ಘಟನೆ ನಡೆದು ಬರೋಬ್ಬರಿ 15 ನಿಮಿಷಗಳ ಬಳಿಕ ಆಂಬುಲೆನ್ಸ್ ಬಂದಿತು, ಸರಕಾರಿ ಆಸ್ಪತ್ರೆಯಿಂದ ಬಸ್ ಡಿಪೋ ಕೇವಲ 1.5km ಅಂತರದಲ್ಲಿದ್ದು, ತುರ್ತುವಾಹನ ಬರುವುದಕ್ಕೆ ತಡವಾಗಿ ಬಂದಿದೆ, ಒಂದು ವೇಳೆ ತುರ್ತು ವಾಹನವು ಬೇಗ ಬಂದಿದ್ದರೇ ಮೃತನು ಬದಕುವ ಅವಕಾಶ ಇರಬಹುದಿತ್ತೇನೋ” ಎಂದು ಹೆಸರು ಹೇಳಲು ಬಯಸದ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಿರುವುದೇ ಒಳ್ಳೆಯದು, ಇದಕ್ಕೆ ಪರಿಹಾರವೆಂದರೇ, ಸಂಬಂಧಪಟ್ಟಂತಹ ಇಲಾಖೆ ಹಾಗೂ ಸ್ಥಳೀಯ ಆಡಳಿತ ಎತ್ತಿಕೊಂಡು ಅತಿ ಹೆಚ್ಚು ಜನಸಂದಣಿ ಹಾಗೂ ವಾಹನಗಳು ಓಡಾಡುವ ರಸ್ತೆಗಳಲ್ಲಿ ಕಡ್ಡಾಯವಾಗಿ ಸಿಗ್ನಲ್ ಲೈಟ್ ಹಾಗೂ ಸ್ಪೀಡ್ ಲಿಮಿಟ್ ಬೋರ್ಡ್, ದೊಡ್ಡದಾದ ರೋಡ್ ಬ್ರೇಕರ್‌”ಗಳು ಹಾಕಲೇಬೇಕಾದಂತಹ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

Leave a Reply

error: Content is protected !!