“ಉಚಿತ ಹೊಲಿಗೆ (ಟೈಲರಿಂಗ್) ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ”

You are currently viewing “ಉಚಿತ ಹೊಲಿಗೆ (ಟೈಲರಿಂಗ್) ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ”

ಕುಕನೂರ : ಪಟ್ಟಣದ ಕುಂತಳ ನಗರದಲ್ಲಿ ಇಂಡಿಯನ್ ಕ್ರಿಶ್ಚಿಯನ್ ಮಿಷನರಿ ಸೊಸೈಟಿ ಕದಾಂಪುರ ಸಿ.ಪಿ.ಎಫ್ ಕುಕನೂರ ಸೆಂಟರ್ ವತಿಯಿಂದ ಆರು ತಿಂಗಳ ಕಾಲ ೩ ತಂಡಗಳಲ್ಲಿ ಟೆಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ರವಿವಾರ ನೆಡೆಯಿತು.
ಕದಾಂಪುರ ಸಿ.ಪಿ.ಎಫ್ ಸೆಂಟೆರನ ಫೀಲ್ಡ್ ಇನ್ ಚಾರ್ಜ್, ದೈವ ಸಂದೇಶಕ ಪಾಸ್ಟರ್ ಜೇಮ್ಸ್ ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಲಸ ಮಾಡುವ ಇಚ್ಛಾಶಕ್ತಿ ಹೊಂದಿದ ಮಹಿಳೆಯರು ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಬದುಕಬಹುದು. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಪ್ರಭಾವಿ ವ್ಯಕ್ತಿಗಳಾಗಿ ಬದುಕುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ನಾನು ಈ ಕಾರ್ಯವನ್ನು ಮಾಡಬಲ್ಲೆ, ಎಂಬ ಇಚ್ಚಾಶಕ್ತಿಯೇ ಕಾರಣ ಎಂದರು.
ಮಹಿಳೆಯರನ್ನು ಆಯ್ಕೆ ಮಾಡಿ ಸ್ವ ಉದ್ಯೋಗ ತರಬೇತಿ ನೀಡಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡುತ್ತಿರುವದು ನಮ್ಮ ಸಂಸ್ಥೆಗೆ ಇದು ಹೆಮ್ಮಯ ಕೆಲಸವಾಗಿದೆ.
ನಾವು ಹೋಲಿಗೆ ತರಬೇತಿ ಜೊತೆಗೆ ಕಂಪ್ಯೂಟರ್ ಕ್ಲಾಸ್, ಟ್ಯೂಷನ್ ಕ್ಲಾಸ್ ನೆಡೆಸಿಕೊಡುತ್ತಿದ್ದೇವೆ ಇದರÀ ಪ್ರಯೋಜನವನ್ನು ಪಡೆದುಕೊಳ್ಳಲು ಮಹಿಳೆಯರು ಹಾಗೂ ಯುವಕ ಯುವತಿಯರು ಮುಂದೆ ಬರಬೇಕು ಎಂದರು.


ಅತಿಥಿಯಾಗಿ ಪತ್ರಕರ್ತ ಭೀಮಾಶಂಕರ ಪಾಣೇಗಾಂವ ಮಾತನಾಡಿ, ಪಟ್ಟಣದಲ್ಲಿ ಮನೆಯ ಕೆಲಸದ ಜೊತೆಗೆ ಮಹಿಳೆಯರಿಗೆ ಈ ಸೊಸೈಟಿಯಿಂದ ಹೋಲಿಗೆ ತರಬೇತಿ ನೀಡುವ ಜೊತೆಗೆ ಪ್ರಮಾಣ ಪತ್ರ ನೀಡಿ ಉಪ ಜೀವನಕ್ಕೆ ಸಾಗಿಸಲು ಆರ್ಥಿಕ ಸಬಲೀಕರಣಕ್ಕೆ ದಾರಿ ಮಾಡಿ ಕೊಡುತ್ತಿರುವುದು ಹೆಮ್ಮಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕುಕನೂರ ಆಯ್.ಎಮ್.ಎಫ್.ಸೆಂಟರ್‌ನ ಇವ್ಯಾಂಜಲಿಸ್ಟ್ ಪಾಸ್ಟರ್ ಅಬ್ರಹಾಂ ಎಸ್.ಬಿ ಅವರು ಸ್ವಾಗತ ಮತ್ತು ನಿರೂಪಣೆ ಮಾಡಿದರು. ಅತಿಥಿಯಾಗಿ ಪಾಸ್ಟರ್ ಉದಯ ಗಂಗಾವತಿ ಉಪಸ್ಥಿತರಿದ್ದರು.
ತರಬೇತಿ ಪಡೆದ ೪೧ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಆಶಾ ಅಬ್ರಹಾಂ, ಶಿಕ್ಷಕಿ ರತನಕರ ಹಾಗೂ ಇತರರಿದ್ದರು.

Leave a Reply

error: Content is protected !!