ಹಾವೇರಿ : ಶೈಕ್ಷಣಿಕ ಪ್ರವಾಸಕ್ಕೆಂದು ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿರುವ ಘಟನೆ ಕೆ ಎಸ್ ಜಿಲ್ಲೆಯ ಸವಣೂರು ತಾಲೂಕಿನ ನಲ್ಲಿ ನಡೆದಿದೆ.
ಇಂದು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಲಜ್ಜಲಗುಡ್ಡೆ ಸರ್ಕಾರಿ ಶಾಲೆಯ 53 ಮಕ್ಕಳು ಹಾಗೂ ಆರು ಜನ ಶಿಕ್ಷಕರು ಶೈಕ್ಷಣಿಕ ಪ್ರವಾಸಕ್ಕೆಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಹತ್ತಿರದ ರಾಕ್ ಗಾರ್ಡನಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ವೇಗವಾಗಿ ಕಾರು ಒಂದು ಬಸ್ ಗೆ ನೇರವಾಗಿ ಎದುರುಗಡೆ ಬರುತ್ತಿದ್ದನ್ನು ಗಮನಿಸಿದ ಬಸ್ ಡ್ರೈವರ್ ಆ ಕಾರ್ ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಈ ಪರಿಣಾಮ ಬಸ್ ಚಾಲಕ ಸೇರಿ ಶಿಕ್ಷಕ ಹಾಗೂ ಆರು ಜನ ಮಕ್ಕಳಿಗೆ ಗಂಭೀರ ಗಾಯಗಳಾಗಿದೆ ಎಂದು ಮಾಹಿತಿ ಇದೆ. ಈ ಗಾಯಾಳುಗಳನ್ನ ಹಾವೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.