ವಿಶ್ವ ಕೌಶಲ್ಯ ಸ್ಪರ್ಧೆ: ಅರ್ಜಿ ಸಲ್ಲಿಕೆಗೆ ಜನವರಿ 7 ಕೊನೆಯ ದಿನ

You are currently viewing ವಿಶ್ವ ಕೌಶಲ್ಯ ಸ್ಪರ್ಧೆ: ಅರ್ಜಿ ಸಲ್ಲಿಕೆಗೆ ಜನವರಿ 7 ಕೊನೆಯ ದಿನ

ಕೊಪ್ಪಳ : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ವಿಶ್ವ ಕೌಶಲ್ಯ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಈ ಸ್ಪರ್ಧೆಗೆ ಅರ್ಹ ಅಭ್ಯರ್ಥಿಗಳಿಂದ ವಿವಿಧ ಹಂತಗಳಲ್ಲಿ ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಜಿಲ್ಲೆ, ವಿಭಾಗೀಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೀಗೆ ಪ್ರತಿ ಹಂತದಲ್ಲೂ ವಿಜೇತರಾಗಿ ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ 2024ರಲ್ಲಿ ಫ್ರಾನ್ಸಿನ ಲಿಯೋನ್‌ನಲ್ಲಿ ನಡೆಯುವ ‘‘ವಿಶ್ವ ಕೌಶಲ್ಯ ಸ್ಪರ್ಧೆ’’ಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಜನವರಿ 07 ರೊಳಗಾಗಿ ಶರಣಪ್ಪ ತೊಂಡಿಹಾಳ, ಜಿಲ್ಲಾ ಸಂಯೋಜಕರು, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಕೊಪ್ಪಳ ಇವರನ್ನು ಮೊ.ನಂ-9743839859 ಸಂಪರ್ಕಿಸಬಹುದಾಗಿದೆ. ಅಥವಾ ಇಲಾಖೆಯ ಜಾಲತಾಣವಾದ www.skillindiadigital.gov.in ರಲ್ಲಿ ಸ್ಪರ್ಧೆಗೆ ಸಂಬAಧಿಸಿದ ಸಂಪೂರ್ಣ ವಿವರವನ್ನು ಪಡೆಯುವದರ ಜತೆಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!