Local Express: ಬಸವರಾಜ ರಾಯರೆಡ್ಡಿ ಅವರಿಗೆ ಡಿಸಿಎಂ ಸ್ಥಾನ ನೀಡಿ : ಡಾ. ಮಲ್ಲಿಕಾರ್ಜುನ್ ಬಿನ್ನಾಳ ಒತ್ತಾಯ

You are currently viewing Local Express: ಬಸವರಾಜ ರಾಯರೆಡ್ಡಿ ಅವರಿಗೆ ಡಿಸಿಎಂ ಸ್ಥಾನ ನೀಡಿ : ಡಾ. ಮಲ್ಲಿಕಾರ್ಜುನ್ ಬಿನ್ನಾಳ ಒತ್ತಾಯ

ಕುಕುನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ,ಅಭಿವೃದ್ಧಿ ಹರಿಕಾರರಾದ ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿದ್ದು ಸ್ವಾಗತಾರ್ಹ.
ಆದರೆ ಬಸವರಾಜ ರಾಯರೆಡ್ಡಿ ಅವರು ಒಬ್ಬ ಹಿರಿಯ ರಾಜಕಾರಣಿಯಾಗಿದ್ದು ಆಡಳಿತದ ಅಂಕಿ ಸಂಖ್ಯೆಗಳ ಬಗ್ಗೆ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಸ್ವತಹ ಮುಖ್ಯಮಂತ್ರಿಗಳೇ ರಾಯರೆಡ್ಡಿ ಅವರನ್ನು ಹೊಗಳಿದ್ದಾರೆ. ” ರಾಯರೆಡ್ಡಿ ಒಬ್ಬ ಕ್ಷಣ ಆರ್ಥಿಕ ಲೆಕ್ಕಾಚಾರದಲ್ಲಿ ಬಾರಿ ನಿಪುಣ, ಕೆಲವು ಸಾರಿ ನಾನು ಸಹಿತ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದೇನೆ” ಎಂದು ಹೇಳಿದ್ದಾರೆ. ಇಂತಹ ಅನುಭವಿ ಹಾಗೂ ನಿಪುಣ ಹಾಗೂ ಅನುಭವಿ ರಾಜಕಾರಣಿಯಾದ ರಾಯರೆಡ್ಡಿ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಡಾಕ್ಟರ್ ಮಲ್ಲಿಕಾರ್ಜುನ ಬಿನ್ನಾಳ ಒತ್ತಾಯಿಸಿದ್ದಾರೆ.

Leave a Reply

error: Content is protected !!