LOCAL NEWS : ಕಾಳಿದಾಸ ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಎಸ್ ಯು ಸಿ ಐ (ಸಿ )ನೇತೃತ್ವ ದಲ್ಲಿ ಪ್ರತಿಭಟನೆ

You are currently viewing LOCAL NEWS : ಕಾಳಿದಾಸ ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಎಸ್ ಯು ಸಿ ಐ (ಸಿ )ನೇತೃತ್ವ ದಲ್ಲಿ ಪ್ರತಿಭಟನೆ

ಕೊಪ್ಪಳ : ನಗರದ ನಗರ ಸಭೆ ಎದುರು ಕಾಳಿದಾಸ ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷ ದ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನೆ ಮಾಡಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಪ್ರತಿಭಟನೆ ಉದ್ದೇಶಿಸಿ ಎಸ್ ಯು ಸಿ ಐ (ಕಮ್ಯುನಿಸ್ಟ್ ) ಪಕ್ಷದ ಮುಖಂಡ ಶರಣು ಗಡ್ಡಿ ಮಾತನಾಡಿ, ಕಾಳಿದಾಸ ನಗರದಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ವಿಲ್ಲದೆ ನಿವಾಸಿಗಳು ದಿನನಿತ್ಯ ನಾನಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಚರಂಡಿ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಿರ್ಮಿಸಿಲ್ಲ , ನೀರು ಸಂಗ್ರಹವಾಗದಂತೆ ಹರಿಯಲು ಚರಂಡಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

ಈ ಹಿಂದೆ ನಗರಸಭೆ ಅಧಿಕಾರಿಗಳು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರೂ ಯಾವದೇ ಕ್ರಮ ಕೈಗೊಂಡಿಲ್ಲ, ಇದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬಡಾವಣೆ ಯಲ್ಲಿ ಕನಿಷ್ಠ ಅವಶ್ಯಕತೆಗಳಾದ ಚರಂಡಿ, ಬೀದಿ ದೀಪ, ರಸ್ತೆ, ಸ್ವಚ್ಛತೆ, ಕುಡಿಯುವ ನೀರಿನಲ್ಲಿ ಚರಂಡಿ ನೀರು ಬರದಂತೆ ಹಾಗೂ ಸೊಳ್ಳೆಗಳು ನಿಯಂತ್ರಣ ಮಾಡಬೇಕಿದೆ ಎಂದರು.

ಮತ್ತೆ ಸಂಜೆಯಾದರೆ ಸಾಕು ಸೊಳ್ಳೆಗಳು ಮನೆ ಒಳಗೆ ಜೇನು ನೊಣಗಳಂತೆ ಬರುತ್ತವೆ. ಚರಂಡಿ ನೀರು ರಸ್ತೆ ಮೇಲೆ ಬಂದು ದುರ್ವಾಸನೆಯಿಂದ ಮನೆಯ ಬಾಗಿಲು ಹಾಕಲೇಬೇಕು. ಸೊಳ್ಳೆ ಹಾವಳಿಯಿಂದ ಮಕ್ಕಳು, ಮಹಿಳೆಯರು, ವೃದ್ಧರು,ಈಗಾಗಲೇ ಡೆಂಗಿ, ಟೈಪಾಡ್, ನಂತಹ ರೋಗಗಳಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಕಾಳಿದಾಸ ನಗರ ಜನರ ಆರೋಗ್ಯ ಕಾಪಾಡಿ ಸ್ವಚ್ಛತೆ ಕಾಪಾಡಬೇಕು. ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಕೂಡಲೇ ನಿರ್ಮಿಸಬೇಕು,ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ, ಶುದ್ಧ ಕುಡಿಯುವ ನೀರು, ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರಾದ ಶರಣು ಪಾಟೀಲ್, ರಮೇಶ್ ವಂಕಲಕುಂಟಿ, ಗಂಗರಾಜು ಅಳ್ಳಳ್ಳಿ, ಮಲ್ಲಪ್ಪ ಮಾದಿನೂರು, ಮಂಜುಳಾ, ದೇವರಾಜ್ ಹೊಸಮನಿ ಹಾಗೂ ಕಾಳಿದಾಸ ನಗರದ ನಿವಾಸಿಗಳಾದ ಉಮೇಶ್ ಆವಾಜಿ , ಮುದಿಯಪ್ಪ ಹದ್ದಿನ, ರಮೇಶ್ ಆವಾಜಿ, ಪ್ರಕಾಶ್ ಗೌಡರ್, ಮಂಜುನಾಥ್ ಸಜ್ಜನ್,, ರಫಿ, ಮಲ್ಲಿಕಾರ್ಜುನ್ ಗುಬ್ಬಿ, ರೆಣಮ್ಮ, ದುರುಗಮ್ಮ, ಸತ್ಯಮ್ಮ, ಸುಮಾ, ಹಾಗೂ ಕಾಳಿದಾಸ್ ನಗರದ 60 ಕ್ಕೂ ಹೆಚ್ಚು ನಿವಾಸಿಗಳು ಭಾಗವಹಿಸಿದರು.

Leave a Reply

error: Content is protected !!