LOCAL BREAKING : ಜುಲೈನಲ್ಲಿ ಮಂತ್ರಿ ಸ್ಥಾನ, ಸಿಎಂ ಸಿದ್ದರಾಮಯ್ಯ ಭರವಸೆ : ಬಸವರಾಜ್ ರಾಯರಡ್ಡಿ ಹೇಳಿಕೆ..!!

You are currently viewing LOCAL BREAKING : ಜುಲೈನಲ್ಲಿ ಮಂತ್ರಿ ಸ್ಥಾನ, ಸಿಎಂ ಸಿದ್ದರಾಮಯ್ಯ ಭರವಸೆ : ಬಸವರಾಜ್ ರಾಯರಡ್ಡಿ ಹೇಳಿಕೆ..!!

ವರದಿ : ಈರಯ್ಯ ಕುರ್ತಕೋಟಿ

ಕುಕನೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಈಗ ಆರ್ಥಿಕ ಸಲಹೆಗಾರ ಹುದ್ದೆ ನಿಭಾಯಿಸಿ ಮುಂದೆ ಜುಲೈ ತಿಂಗಳಲ್ಲಿ ಮಂತ್ರಿ ಸ್ಥಾನ ನೀಡುತ್ತೇನೆ ಎಂಬ ಭರವಸೆ ನೀಡಿದ್ದಾರೆ, ಹೀಗಾಗಿ ಸಿದ್ದರಾಮಯ್ಯ ಅವರ ಮೇಲೆ ಇರುವ ಗೌರವದಿಂದ ಈ ಹುದ್ದೆ ಒಪ್ಪಿಕೊಂಡಿದ್ದೇನೆ ಎಂದು ಶಾಸಕ, ಸಿ ಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ವಿಶೇಷ ಕಾಳಜಿ, ಮುತುವರ್ಜಿ ವಹಿಸಿದ್ದಾರೆ. ಅವರ ಮೇಲೆ ನನಗಿರುವ ಗೌರವ, ಅಭಿಮಾನಕ್ಕಾಗಿ ಆರ್ಥಿಕ ಸಲಹೆಗಾರ ಹುದ್ದೆ ಒಪ್ಪಿಕೊಂಡಿದ್ದೇನೆ, ಇದನ್ನು ಚನ್ನಾಗಿ ನಿಭಾಯಿಸಿ ಮುಂದೆ ಜುಲೈ ತಿಂಗಳಲ್ಲಿ ಮಂತ್ರಿ ಮಾಡುತ್ತೇನೆ ಎಂದು ಸಿ ಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಶಾಸಕ ಹಾಗೂ ಸಿ ಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಹೇಳಿದ್ದಾರೆ.

ತಾಲೂಕಿನ ಮಂಗಳೂರು ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ರಾಯರಡ್ಡಿ ಮಾತನಾಡಿದ್ದು. ‘ಸಂಪುಟ ದರ್ಜೆ ಸ್ಥಾನಮಾನದ ಆರ್ಥಿಕ ಸಲಹೆಗಾರ ಹುದ್ದೆ ಪವರ್ ಲೆಸ್ ಅಲ್ಲ ಅದು ಪವರ್ ಫುಲ್ ಹುದ್ದೆಯಾಗಿದೆ, ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ಇಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಕೊಟ್ಟಿದ್ದಾರೆ. ಇದಕ್ಕೆ ನಾನು ಅಭಿನಂದನೆ ತಿಳಿಸುತ್ತೇನೆ’ ಎಂದು ರಾಯರಡ್ಡಿ ಹೇಳಿದರು.

‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಡವರಿಗೆ ಐದು ಗ್ಯಾರಂಟಿಯೋಜನೆ ಸಮರ್ಪಕವಾಗಿ ಜಾರಿಗೆ ತಂದಿದೆ, ನಮ್ಮದು ಜನಪರ, ಬಡವರ ಪರ ಸರ್ಕಾರ, ಆದರೆ ಕೇಂದ್ರದ ಬಿಜೆಪಿ ಸರ್ಕಾರ ಸಾಕಷ್ಟು ದಾಸ್ತಾನು ಇದ್ದರೂ ಕೂಡಾ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡುವ ನಮ್ಮ ಬೇಡಿಕೆಯನ್ನು ತಿರಸ್ಕರಿಸಿದೆ’ ಎಂದು ಶಾಸಕ ರಾಯರಡ್ಡಿ ಹೇಳಿದರು.

ಮಂಗಳೂರು ಗ್ರಾಮದಲ್ಲಿ 3.8 ಕೋಟಿ ರೂ ವೆಚ್ಚದ ಬೈ ಪಾಸ್ ರಸ್ತೆ ನಕಾಮಗಾರಿ ಮಾಡಲಾಗುತ್ತದೆ, ಹೈ ಟೆಕ್ ಬಸ್ ನಿಲ್ದಾಣ ಮಾಡಲಾಗುತ್ತದೆ ಎಂದು ಶಾಸಕ ಬಸವರಾಜ್ ರಾಯರಡ್ಡಿ ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಚ್ ಪ್ರಾಣೇಶ್, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್, ಕಾಂಗ್ರೆಸ್ ಮುಖಂಡರಾದ ಬಸವರಾಜ್ ಉಳ್ಳಾಗಡ್ಡಿ, ಹನುಮಂತ್ ಗೌಡ ಚೆಂಡೂರು, ಸಿ ಪಿ ಐ ಮೌನೇಶ್ ಮಾಲಿ ಪಾಟೀಲ್, ಈರಣ್ಣ ಹಳ್ಳಿಕೇರಿ, ಅಶೋಕ್ ತೋಟದ್, ಕೇರಿಬಸಪ್ಪ ನಿಡಗುಂದಿ, ಬಸವರಾಜ್ ಪೂಜಾರ್ ಇತರರು ಉಪಸ್ಥಿತರಿದ್ದರು.

Leave a Reply

error: Content is protected !!