LOCAL NEWS : ಹಾಲಿ-ಮಾಜಿ ಶಾಸಕರ ಮುಖಾಮುಖಿ ಭೇಟಿ : ಸರ್ಕಾರದ ಸುಗಮ ಆಡಳಿತಕ್ಕೆ ಸಹಕಾರಿ ಸಂಘಗಳ ಮಹತ್ವದ ಪಾತ್ರ : ಶಾಸಕ ರಾಯರೆಡ್ಡಿ

You are currently viewing LOCAL NEWS : ಹಾಲಿ-ಮಾಜಿ ಶಾಸಕರ ಮುಖಾಮುಖಿ ಭೇಟಿ : ಸರ್ಕಾರದ ಸುಗಮ ಆಡಳಿತಕ್ಕೆ ಸಹಕಾರಿ ಸಂಘಗಳ ಮಹತ್ವದ ಪಾತ್ರ : ಶಾಸಕ ರಾಯರೆಡ್ಡಿ

ಕುಕನೂರು : ‘ಸರ್ಕಾರದ ಪ್ರಮುಖ ಭಾಗವಾಗಿ ರೈತಾಪಿ ವರ್ಗದವರ ಹಾಗೂ ಜನಸಾಮಾನ್ಯರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಕೇಂದ್ರ ಅಂದ್ರೆ ಅದು ಸಹಕಾರಿ ಸಂಘದ ಬ್ಯಾಂಕುಗಳು, ಸರಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸಹಕಾರಿ ಸಂಘಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಇಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆರ್ ಕೆ ಡಿ ಸಿ ಸಿ ಬ್ಯಾಂಕ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ರಾಯರೆಡ್ಡಿ, ‘ ರಾಯಚೂರು ಕೊಪ್ಪಳ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ರಾಯಚೂರು ಇದರ ಕುಕನೂರು ಶಾಖೆಕ್ಕೆ ಯಾವುದೇ ಸ್ವಂತ ಕಟ್ಟಡವಿಲ್ಲವೇ ಇಷ್ಟು ದಿನ ಬಹಳ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಇದೀಗ ಈ ಬ್ಯಾಂಕಿಗೆ ಹೊಸದಾದ ಕಟ್ಟಡ ನಿರ್ಮಾಣವಾಗಿದ್ದು, ಇದರಿಂದ ಗ್ರಾಹಕರಿಗೆ ತೊಂದರೆ ತಾಪತ್ರ ಇಲ್ಲದೆ ವಹಿವಾಟು ಮಾಡಬಹುದು ಎಂದರು.

ಹಾಲಿ-ಮಾಜಿ ಶಾಸಕರ ಮುಖಾಮುಖಿ ಭೇಟಿ

ಈ ಕಾರ್ಯಕ್ರಮಕ್ಕೂ ಮುನ್ನ ಹಾಲಿ-ಮಾಜಿ ಶಾಸಕರ ಮುಖಾಮುಖಿ ಭೇಟಿಯಾದ ಪ್ರಸಂಗ ನಡೆಯಿತು. ಕಾರ್ಯಕ್ರಮಕ್ಕೆ ಬಂದ ಶಾಸಕ ಬಸವರಾಜ ರಾಯರೆಡ್ಡಿ ಅವರು ಅಧಿಕಾರಿ ಹಾಗೂ ಅಲ್ಲಿನ ಸಿಬ್ಬಂದಿಗಳಿಗೆ ಸೂಚನೆ ಒಂದನ್ನ ನೀಡಿದರು, ಅದೇನೆಂದರೆ ಹಾಲಪ್ಪ ಆಚಾರ್ ಬರೋವರೆಗೂ ಈ ಕಾರ್ಯಕ್ರಮದ ಉದ್ಘಾಟನೆ ಮಾಡುವುದಿಲ್ಲ, ಹಾಗಾಗಿ ಆದಷ್ಟು ಬೇಗ ಅವರನ್ನು ಕರೆತನ್ನಿ ಎಂದು ಸಿಬ್ಬಂದಿಗಳಿಗೆ ತಿಳಿಸಿದರು. ಮಾಜಿ ಸಚಿವ ಹಾಗೂ ಮಾಜಿ ಶಾಸಕ ಹಾಲಪ್ಪ ಆಚಾರ್ಯ ಬರುವವರೆಗೂ ಕಾರ್ಯಕ್ರಮವನ್ನು ಉದ್ಘಾಟಿಸದೆ ಅವರಿಗಾಗಿ ಬರೋಬ್ಬರಿ ಅವರಿಗಾಗಿ 10 ನಿಮಿಷಗಳ ಕಾಲ ಕಾದು ಬಳಿಕ ಬಂದ ಮೇಲೆ ಕಟ್ಟಡ ಉದ್ಘಾಟನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ‘ ಈ ಸಹಕಾರಿ ಸಂಘ ಮಹತ್ತರವಾದ ಹೆಜ್ಜೆನಿಟ್ಟಿದ್ದು, ಈ ಸಹಕಾರಿ ಸಂಘದಿಂದ ಸಾಕಷ್ಟು ಜನಸಾಮಾನ್ಯರಿಗೆ ಸಹಕಾರಿಯಾಗಿದೆ, ಸಾರ್ವಜನಿಕರಿಗೆ ರಾಜ್ಯದ ಹಾಗೂ ದೇಶದ ಆರ್ಥಿಕ ವ್ಯವಸ್ಥೆಗೆ ಸಹಕಾರಿ ಸಂಘಗಳ ಪಾತ್ರವು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಆಡಳಿತ ಮಾಡುತ್ತಿರುವ ಸರ್ಕಾರಗಳು ಸಹಕಾರಿ ಸಂಘಗಳಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿ, ರಾಜ್ಯ ಬಜೆಟ್ ನಲ್ಲಿ ವಿಶೇಷವಾದ ಮಹತ್ವವನ್ನು ಸಹಕಾರಿ ಸಂಘಗಳಿಗೆ ನೀಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವನಾಥ್ ಮಾಲಿ ಪಾಟೀಲ್ ತೋರಣದಿನ್ನಿ ಅಧ್ಯಕ್ಷರು, ಆರ್ ಕೆ ಡಿ ಸಿ ಸಿ ಬ್ಯಾಂಕ್ ರಾಯಚೂರು, ಉಪಾಧ್ಯಕ್ಷರು ಆರ್ ಕೆ ಡಿ ಸಿ ಸಿ ಬ್ಯಾಂಕ್, ಶಿವಶಂಕರ್ ಗೌಡ ಪಾಟೀಲ, ಬಸವರಾಜಂದಪ್ಪ ರಾಜೂರ ಶೇಖರಗೌಡ ಎಸ್ ಉಳ್ಳಾಗಡ್ಡಿ, ಐಎಸ್ ಗಿರೆಡ್ಡಿ ಎಚ್ ಪ್ರಾಣೇಶ್ ತಹಸೀಲ್ದಾರರು ಕುಕನೂರು, ರಾಜೇಂದ್ರ ಕುಮಾರ್ ಶೆಟ್ಟರ್ ಶರಣಪ್ಪ ಹ್ಯಾಟಿ ಶರಣೆಗೌಡ ಪೊಲೀಸ್ ಪಾಟೀಲ್, ರಮೇಶ್ ವೈದ್ಯ, ಹಾಗೂ ಆರ್ ಕೆ ಡಿ ಸಿ ಸಿ ಬ್ಯಾಂಕ್ನ ನಿರ್ದೇಶಕರು, ಸಿಬ್ಬಂದಿ ವರ್ಗ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

error: Content is protected !!