BIG BREAKING : ನೀರಲ್ಲಿ ಮುಳುಗಿ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ನಿಲಯದ ವಿದ್ಯಾರ್ಥಿ ಸಾವು!! : ಶಾಲೆಯ ಸಿಬ್ಬಂದಿಯ ನಿರ್ಲಕ್ಷ ಆರೋಪ ..!

You are currently viewing BIG BREAKING : ನೀರಲ್ಲಿ ಮುಳುಗಿ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ನಿಲಯದ ವಿದ್ಯಾರ್ಥಿ ಸಾವು!! : ಶಾಲೆಯ ಸಿಬ್ಬಂದಿಯ ನಿರ್ಲಕ್ಷ ಆರೋಪ ..!

ನೀರಲ್ಲಿ ಮುಳುಗಿ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ನಿಲಯದ ವಿದ್ಯಾರ್ಥಿ ಸಾವು

ಕುಕನೂರು : ಪಟ್ಟಣದ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಶಾಲೆಯ ಹತ್ತಿರದ ಕ್ವಾರಿಗೆ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಡೆದಿದೆ.

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಕುಕನೂರು ಪೊಲೀಸ್ ಠಾಣೆಯ ಸಿಬ್ಬಂದಿ ಗಳು ಮೃತ ದೇಹದ ಹುಡುಕಾಟ ನಡೆಸಿದ್ದಾರೆ.

ಸ್ಥಳೀಯರು ಹೇಳುವಂತೆ  ಇಂದು ಮದ್ಯಾಹ್ನ ಊಟದ ನಂತರ ಸುಮಾರು 1:30 ಕ್ಕೆ ಶಾಲೆ ಕಾಂಪೌಂಡ್ ಹಾರಿ ಹತ್ತಿರ ಕ್ವಾರಿಗೆ ಮೂವರು ವಿದ್ಯಾರ್ಥಿಗಳು ಈಜಲು ಬಂದಿದ್ದಾರೆ. ಅದರಲ್ಲಿ ಪ್ರದೀಪ್ ಎನ್ನುವ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಈ ಕುರಿತಂತೆ ಕುಕನೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು, ಅಗ್ನಿ ಶಾಮಕ ಅಧಿಕಾರಿಗಳು ಮೃತ ದೇಹದ ಶೋಧ ಕಾರ್ಯ ನಡೆಸಿದ್ದಾರೆ.

“ವಸತಿ ಶಾಲೆಯ ಸಿಬ್ಬಂದಿಯ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಸ್ಥಳೀಯರು, ಶಾಲೆಯಲ್ಲಿ ಓದುತ್ತಿರುವ ಇತರ ವಿದ್ಯಾರ್ಥಿಗಳ ಪೋಷಕರು ಆರೋಪಿಸುತ್ತಿದ್ದಾರೆ”

Leave a Reply

error: Content is protected !!