ಕುಕನೂರು : ಪಟ್ಟಣದ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಶಾಲೆಯ ಹತ್ತಿರದ ಕ್ವಾರಿಗೆ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಡೆದಿದೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಕುಕನೂರು ಪೊಲೀಸ್ ಠಾಣೆಯ ಸಿಬ್ಬಂದಿ ಗಳು ಮೃತ ದೇಹವನ್ನು ಸ್ಥಳೀಯರ ತೆಪ್ಪದ ಸಹಾಯದಿಂದ ಮೃತ ದೇಹ ಸಿಕ್ಕಿದೆ.
ಸ್ಥಳೀಯರು ಹೇಳುವಂತೆ ಮದ್ಯಾಹ್ನ ಊಟದ ನಂತರ ಶಾಲೆ ಕಾಂಪೌಂಡ್ ಹಾರಿ ಹತ್ತಿರ ಕ್ವಾರಿಗೆ ಮೂವರು ವಿದ್ಯಾರ್ಥಿಗಳು ಈಜಲು ಬಂದಿದ್ದಾರೆ. ಅದರಲ್ಲಿ ಪ್ರದೀಪ್ ಎನ್ನುವ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಕುರಿತಂತೆ ಕುಕನೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು, ಅಗ್ನಿ ಶಾಮಕ ಅಧಿಕಾರಿಗಳು ಮೃತ ದೇಹದ ಶೋಧ ಕಾರ್ಯ ನಡೆಸಿ ಪತ್ತೆ ಹಚ್ಚಿದ್ದಾರೆ.