ಕುಕನೂರು : ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅರ್ಹ ಪಲಾನು ಲಭವಿಗಳು ಸದ್ಭಳಕೆ ಮಾಡಿಕೊಳ್ಳಿ’ ಎಂದು ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಶಿರಸಿ ಹೇಳಿದರು.
ಕುಕನೂರು ಪಟ್ಟಣ ಪಂಚಾಯತ್ ಆವರಣದಲ್ಲಿ ವಿಕಸಿತ ಭಾರತ ನಮ್ಮ ಸಂಕಲ್ಪ ಯಾತ್ರೆಯ ವಾಹನ ಬರಮಾಡಿಕೊಂಡು ನಡೆದ ಕಾರ್ಯಕ್ರಮದಲ್ಲಿ ತಿಪ್ಪಣ್ಣ ಶಿರಸಿ ಮಾತನಾಡಿ. ‘ಕೇಂದ್ರ ಸರ್ಕಾರ ಉಜ್ವಲ ಉಚಿತ ಅನಿಲ ಸಂಪರ್ಕ, ಜೀವ ವಿಮೆ, ಅಟಲ್ ಪೆನ್ಷನ್ ಯೋಜನೆ, ಆಯುಷ್ ಮಾನ್ ಭಾರತ ಅರೋಗ್ಯ ವಿಮೆ, ಭೇಟಿ ಬಚಾವ್ ಭೇಟಿ ಪಡಾವ್, ಮಾತೃ ಯೋಜನೆ ಹೀಗೆ ಹಲವಾರು ಯೋಜನೆ ಜಾರಿಗೆ ತಂದಿದೆ, ಜನಸಾಮಾನ್ಯರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ವಿಕಸಿತ ಭಾರತ ನಮ್ಮ ಸಂಕಲ್ಪ ಯಾತ್ರೆಯ ವಾಹನದ ಮೂಲಕ ದೇಶದ ಎಲ್ಲಾ ಕಡೆ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಜನಸಾಮಾನ್ಯರು ಈ ಎಲ್ಲಾ ಯೋಜನೆಗಳ ಬಗ್ಗೆ ತಿಳಿದುಕೊಂಡು ಅದರ ಪ್ರಯೋಜನ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಚೆ ಇಲಾಖೆ, ಅರೋಗ್ಯ ಇಲಾಖೆ ಸೇರಿದಂತೆ ಯೋಜನೆಯ ಸಂಬಂದಿಸಿದ ಇಲಾಖೆಯ ಪ್ರತಿನಿಧಿಗಳು ವಿಸ್ತ್ರತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮುರಳೀಧರ ರಾವ್ ಕುಲಕರ್ಣಿ, ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಪಿ ಸುಬ್ರಮಣ್ಯ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಅರೋಗ್ಯ ಇಲಾಖೆ ಚನಬಸಯ್ಯ ಗಣಾಚಾರ್, ಆರ್ಥಿಕ ಸಮಾಲೋಚಕ, ಪಟ್ಟಣ ಪಂಚಾಯತ್ ಬಿಜೆಪಿ ಸದಸ್ಯರು, ಮುಖಂಡರು, ಬಿಜೆಪಿ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.