ಕುಕನೂರು : ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರಕ್ಕೆ ಬಹಳಷ್ಟು ಆರ್ಥಿಕ ಹೊರೆ ಆಗಲಿದೆ ಎಂದು ಆರ್ಥಿಕ ತಜ್ಞನರು ಅಭಿಪ್ರಾಯ ಪಟ್ಟಿದ್ದಾರೆ. ಇದು ಅಲ್ಲದೇ ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರ ಶಾಸಕ ಬಸವರಾಜ ರಾಯರೆಡ್ಡಿ ಅವರು ಕೂಡಾ ಇದನ್ನೇ ಹೇಳಿದ್ದಾರೆ. ಇದೀಗ ಮುಖ್ಯಮಂತ್ರಿಗಳ ಆರ್ಥಿಕ ಸಲಹಗಾರರ ಕ್ಷೇತ್ರದಲ್ಲಿ ಸರ್ಕಾರಕ್ಕೆ ದೋಖಾ ಆಗಿರುವುದು ಬೆಳಕಿಗೆ ಬಂದಿದೆ. ಕೂಕನೂರು ಪಟ್ಟಣದ KSRTC ಡಿಪೋದಲ್ಲಿ ಸರ್ಕಾರಕ್ಕೆ ತುಂಬ ಬೇಕಾದ ಹಣವನ್ನು ವೈಯಕ್ತಿಕ ಕಾರಣಕ್ಕಾಗಿ ಡಿಪೋದ ಕಿರಿಯ ಸಹಾಯಕ ಅಜಿತ್ ಎಂಬಾತ ಬಳಸಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವ ಘಟನೆ ನಡೆದಿದೆ.
ಕಳೆದ ವರ್ಷದ ನವಂಬರ್ ಹಾಗೂ ಡಿಸೆಂಬರ್ ತಿಂಗಳ ಶೈಕ್ಷಣಿಕ ಪ್ರವಾಸದ ಸಮಯವಾಗಿದ್ದು, ಸುಮಾರು 2 ತಿಂಗಳಲ್ಲಿ ನೂರಾರು ಬಸ್ಸುಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಬಳಸಿಕೊಂಡಿದ್ದಾರೆ. ಅದರಿಂದ ಲಕ್ಷಾನುಗಟ್ಟಲೆ ಹಣವನ್ನು ಸರ್ಕಾರಕ್ಕೆ ತುಂಬದೆ ಅಜಿತ್ ಎಂಬುವರು ತನ್ನ ವೈಯಕ್ತಿಕ ಕಾರಣಕ್ಕಾಗಿ ಹಣವನ್ನ ದುರುಪಯೋಗ ಮಾಡಿಕೊಂಡು ತನ್ನ ಕೆಲಸದ ಸಮಯವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ಮೂಲಕ ಕರ್ತವ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಹೀಗೆ ಸಾರ್ವಜನಿಕರಿಂದ ಬಂತದಂತಹ ಹಣವನ್ನು ತನ್ನ ವೈಯಕ್ತಿಕ ಕಾರ್ಯಕ್ಕೆ ದುರ್ಬಳಕೆ ಮಾಡಿಕೊಂಡಿದ್ದು ಕಂಡುಬದೆ. ಇದೀಗ ಆತನಿಂದ ಘಟಕ ವ್ಯವಸ್ಥಾಪಕ ಸುನಿಲ್ ಐದ್ರಿಯವರು ಅಂದಾಜು 2.50 ಲಕ್ಷ ಹಣವನ್ನು ವಸೂಲಿ ಮಾಡಿದ್ದಾರೆ ಎಂದು ಮಾಹಿತಿ ಇದೆ.
‘ಡಿಪೋದ ಕ್ಯಾಶರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎಂಬ ವಿಷಯ ತಿಳಿದ ಕೂಡಲೇ ಅವರನ್ನು ತನಿಖೆಗೆ ಒಳ ಪಡಿಸಿ ವಿಚಾರಣೆ ಮಾಡಿದ್ದೇವೆ. ಇದೀಗ ಅವರಿಂದ ಹಣವನ್ನು ವಸೂಲಿ ಮಾಡಿದ್ದು, ಇನ್ನು ಎರಡು ದಿನಗಳಲ್ಲಿ ಈ ಪ್ರಕರಣಕ್ಕೆ ಸಂಭಂದಿಸಿದಂತೆ ತನಿಕೆ ಪೂರ್ಣಗೊಳಿಸುತ್ತೇವೆ. ಮೇಲ್ನೋಟಕ್ಕೆ ನೋಡುವುದಾರೇ ಡೀಪೋದ ಮೇಲುಸ್ತುವಾರಿಗಳ ಬೇಜವಾಬ್ದಾರಿ ಕಾಣುತ್ತಿದೆ’
ಸುನಿಲ್ ಐದ್ರಿ, ಘಟಕ ವ್ಯವಸ್ಥಾಪಕ