ಬೆಂಗಳೂರು : ರಾಜ್ಯ ಸರ್ಕಾರದಿಂದ ವಿನೂತನ ಪ್ರಯತ್ನ ನಡೆಯುತ್ತಿದ್ದು, ಇದೀಗ ವಿವಿಧ ಇಲಾಖೆಗಳಲ್ಲಿನ ಯೋಜನೆಗಳು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನವಾಗುವ ಬಗ್ಗೆ ಕ್ಷೇತ್ರಮಟ್ಟದ ಪ್ರಗತಿ ವೀಕ್ಷಣೆಗೆ ಪೂರಕವಾಗಿ ಅಭಿವೃದ್ಧಿ ಪಡಿಸಿರುವ “ಪ್ರಗತಿ” ಮೊಬೈಲ್ ಅಪ್ಲಿಕೇಶನ್ ತಂತ್ರಾಂಶಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದರು.
ಜನವರಿ 31 ರಂದು (ಬುಧವಾರ) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾವ್ಯದರ್ಶಿಗಳ ಸಭೆ ನಡೆಸಿದ ಸಿಎಂ, ಕ್ಷೇತ್ರಮಟ್ಟದ ಪ್ರಗತಿ ವೀಕ್ಷ ಣೆಗೆ ಪೂರಕವಾಗಿ ಅಭಿವೃದ್ಧಿ ಪಡಿಸಿರುವ “ಪ್ರಗತಿ” ಆ್ಯಪ್‌ನ ತಂತ್ರಾಂಶಕ್ಕೆ ಚಾಲನೆ ನೀಡಿದರು.
“ಪ್ರಗತಿ” ಮೊಬೈಲ್ ಅಪ್ಲಿಕೇಶನ್ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಮೇಲ್ವಿಚಾರಣೆಗೆ ಬಹಳಷ್ಟು ಸಹಾಯಕಾರಿಯಾಗಲಿದೆ. ಪ್ರತಿಯೊಂದು ಹಂತವನ್ನೂ ತೋರಿಸುವುದರಿಂದ ಅಧಿಕಾರಿಗಳಿಗೆ ಸುಲಭವಾಗಿ ಕೆಲಸ ಮಾಡಲು ಹಾಗೂ ಯಾವ ಹಂತದಲ್ಲಾದರೂ ಸಮಸ್ಯೆ ಸೃಷ್ಟಿಯಾಗಿದ್ದರೇ, ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
1) ಅನುದಾನದ ಪರಿಣಾಮಕಾರಿ ಬಳಕೆ.
2) ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ನಿಗಾ ವಹಿಸುವುದು.
3) ವೇಗವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
4) ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಮೇಲಿನ ಹಂತದ ಅಧಿಕಾರಿಗಳಿಗೆ ಸ್ಪಷ್ಟತೆ ನೀಡುತ್ತದೆ.
ಸದ್ಯಕ್ಕೆ ಈ ತಂತ್ರಾಂಶ ಸಿದ್ಧಪಡಿಸಿದ್ದು, ಆ್ಯಪ್ ಕೂಡ ಸಿದ್ಧವಾಗಿದೆ. ಯೂಸರ್ ಐಡಿ ಹೊಂದಿರುವವರು ಮಾತ್ರ ಬಳಕೆ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ರಾಜಕೀಯ ಕಾವ್ಯದರ್ಶಿ ಗೋವಿಂದ ರಾಜು, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತ ಶಾಲಿನಿ ರಜನೀಶ್ ಸೇರಿ ಇತರರು ಹಾಜರಿದ್ದರು.