ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಪ್ರಭಾವದಿಂದ ರಾಜ್ಯ ಸರ್ಕಾರವು ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇಕಡ 185 ರಿಂದ 195ಕ್ಕೆ ಹೆಚ್ಚಳ ಮಾಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ಬಿಯರ್ ಬಾಟಲಿಗೆ 5 ರೂ. ನಿಂದ 12 ರೂಪಾಯಿವರೆಗೆ ಬಿಯರ್ ದರ ಹೆಚ್ಚಳವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಕುರಿತಂತೆ ಅಬಕಾರಿ ಇಲಾಖೆ ಮೊದಲಿಗೆ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ಬಳಿಕ ಸಲ್ಲಿಕೆಯಾದ ಆಕ್ಷೇಪಣೆ ಪರಿಗಣಿಸಿ ಇದೀಗ ಸುಂಕ ಏರಿಕೆಯ ಬಗ್ಗೆ ಜನವರಿ 31 ರಂದು (ಬುಧವಾರ) ಅಂತಿಮ ಆದೇಶ ಹೊರಡಿಸಿದೆ.
ಇದೀಗ ಅದರಂತೆ ಬಿಯರ್ ದರ ಹೆಚ್ಚಳವಾಗಲಿದೆ. ಅಬಕಾರಿ ಇಲಾಖೆ ಮೊದಲಿಗೆ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ನಂತರದಲ್ಲಿ ಸಲ್ಲಿಕೆಯಾದ ಆಕ್ಷೇಪಣೆ ಪರಿಗಣಿಸಿ ಇದೀಗ ಸುಂಕ ಏರಿಕೆಯ ಕುರಿತು ನಿನ್ನೆ ಅಂತಿಮ ಆದೇಶ ಹೊರಡಿಸಿದೆ. ಅದರಂತೆ ಬಿಯರ್ ದರ ಹೆಚ್ಚಳವಾಗಲಿದೆ. ಸಾಮಾನ್ಯ ಬ್ರಾಂಡ್‌ಗಳಿಂದ ಪ್ರೀಮಿಯಂ ಬ್ರಾಂಡ್‌ಗಳವರೆಗೆ ಎಲ್ಲಾ ಬಗೆಯ ಬಿಯರ್ ದರ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಬಿಯರ್ ದರ ಹೆಚ್ಚಳವಾಗುತ್ತಿರುವುದು ಕಳೆದ 7 ತಿಂಗಳಲ್ಲಿ ಇದು 3ನೇ ಬಾರಿ ಆಗಿದೆ ಎಂದು ಮಾಹಿತಿ ಇದೆ.