ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲ ಸೀತರಾಮನ್ ಅವರು ಇಂದು ಮಂಡನೆ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್ ಎಲ್ಲರ ಗಮನ ನೆಟ್ಟಿದ್ದು, ಈ ನಡುವೆ ಇಂದು ನಿರ್ಮಲ ಸೀತಾರಾಮನ್ ಅವರು ಮಂಡನೆ ಮಾಡುತ್ತಿರುವ ಬಜೆಟ್‌ನಲ್ಲಿ “ನಾವು ಗರೀಬ್, ಮಹಿಲಾಯೆನ್, ಯುವ ಮತ್ತು ಅನ್ನದಾತನ ಬಗ್ಗೆ ಗಮನ ಹರಿಸಬೇಕಾಗಿದೆ. ಅವರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳು ನಮ್ಮ ಅತ್ಯುನ್ನತ ಆದ್ಯತೆಗಳಾಗಿವೆ” ಎಂದು ಹೇಳಿದರು.
ಇದೇ ವೇಳೆ ಅವರು ಮಾತನಾಡುತ್ತ ಮುಂದಿನ ವರ್ಷದಲ್ಲಿ 3 ಕೋಟಿ ಮನೆ ನಿರ್ಮಾಣ ಮಾಡಲಾಗುವುದು. ಅದರ ಜೊತೆಗೆ ಪ್ರತಿ ಮನೆಗೆ 300 ಯುನಿಟ್ ವಿದ್ಯುತ್ ಉಚಿತವಾಗಿ ನಡೆಯಲಿದೆ ಇದು ಮುಂದಿನ 5 ವರ್ಷಗಳು ಅನ್ವಯವಾಗಲಿದೆ. ಸಾಂಕ್ರಾಮಿಕ ರೋಗವು ಜಗತ್ತಿಗೆ ಆಹಾರ, ರಸಗೊಬ್ಬರ, ಆಹಾರ ಮತ್ತು ಹಣಕಾಸಿನ ಬಿಕ್ಕಟ್ಟಿಗೆ ಕಾರಣವಾಗಿದೆ, ಆದರೆ ಭಾರತವು ಯಶಸ್ವಿಯಾಗಿ ತನ್ನ ಹಾದಿಯಲ್ಲಿ ಸಾಗಿದೆ. ವಿಶ್ವದ ಕಷ್ಟದ ಸಮಯದಲ್ಲಿ ಭಾರತವು ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಎಂದು ಅವರು ಹೇಳಿದರು.