LOCAL NEWS : ಕುಕನೂರು ತಹಶೀಲ್ದಾರ್ ಹೆಚ್‌. ಪ್ರಾಣೇಶ್ ವರ್ಗಾವಣೆ..!

You are currently viewing LOCAL NEWS : ಕುಕನೂರು ತಹಶೀಲ್ದಾರ್ ಹೆಚ್‌. ಪ್ರಾಣೇಶ್ ವರ್ಗಾವಣೆ..!

ಕುಕನೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಬರೋಬ್ಬರಿ 67 ತಹಶೀಲ್ದಾರ್ ಗ್ರೇಡ್ ೧ ಹುದ್ದೆಗಳಲ್ಲಿದ್ದಂತ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಸಾರ್ವತ್ರಿಕ ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗ ಹೊರಡಿಸಿರುವಂತ ಮಾರ್ಗಸೂಚಿಯ ಅನ್ವಯ 67 ತಹಶೀಲ್ದಾರ್ ಗ್ರೇಡ್ 1 ಹಾಗೂ 3 ಜನ ತಹಶೀಲ್ದಾರ್ ಗ್ರೇಡ್ 2 ವರ್ಗಾವಣೆ ಮಾಡಿ ಮಾಡುತ್ತಿರೋದಾಗಿ ತಿಳಿಸಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಾ ತಹಶೀಲ್ದಾರ್ ಗ್ರೇಡ್ 1 ಹೆಚ್‌. ಪ್ರಾಣೇಶ್ ಕೂಡ ವರ್ಗಾವಣೆಯಾಗಿದ್ದಾರೆ. ಇವರು ಕುಂದಗೋಳ ತಹಶೀಲ್ದಾರ್ ಅಶೋಕ ಶಿಗ್ಗಾವಿ ಅವರ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. ಇದೀಗ ಕುಕನೂರು ತಾಲೂಕಿಗೆ ಅಶೋಕ ಶಿಗ್ಗಾವಿ ನೇಮಕ ಮಾಡಿ ಸೂತ್ತೋಲೆ ಹೊರಡಿಸಲಾಗಿದೆ.

Leave a Reply

error: Content is protected !!