ನವದೆಹಲಿ : ಬಿಜೆಪಿ ಹಿರಿಯ ನಾಯಕ, ಬಿಜೆಪಿ ಬಿಷ್ಮ, ಲಾಲ್ ಕೃಷ್ಣ ಅಡ್ವಾಣಿ ಗೆ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಡ್ವಾಣಿಗೆ ಅಭಿನಂದನೆಗಳು ತಿಳಿಸಿದ್ದಾರೆ. ಮೊನ್ನೆಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಥಾಕೂರ್ ಗೆ “ಭಾರತ ರತ್ನ” ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಇದೀಗ ಹಿರಿಯ ರಾಜಕೀಯ ಮುತ್ಸದ್ದಿ ಎಲ್ಇ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇದಕ್ಕೂ ಮೊದಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಮಾಡಲಾಗಿತ್ತು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆತ್ಮೀಯ ಒಡನಾಡಿ ಎಲ್ ಕೆ ಅಡ್ವಾಣಿ, ರಾಮ ಮಂದಿರ ನಿರ್ಮಾಣ ದ ಶಪಥ ತೊಟ್ಟಿದ್ದ ಅಡ್ವಾಣಿ, ರಾಮ ಮಂದಿರ ನಿರ್ಮಾಣ ಹೋರಾಟ ಮುಂಚೂಣಿಯಲ್ಲಿ ಅಡ್ವಾಣಿ ಭಾಗವಹಿಸಿದ್ದರು. ರಥ ಯಾತ್ರೆ ಮೂಲಕ ದೇಶದುದ್ದಕ್ಕೂ ಮಂದಿರ ನಿರ್ಮಾಣದ ಜಾಗೃತಿ ಅಭಿಯಾನ ಮಾಡಿದ್ದರು ಎಲ್ ಕೆ ಅಡ್ವಾಣಿ , ಅವರು ಕೇಂದ್ರದಲ್ಲಿ ಉಪ ಪ್ರಧಾನಿಯಾಗಿ, ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ರತ್ನ ಪ್ರಶಸ್ತಿ ಘೋಷಣೆ ಮೂಲಕ ಮೂಲಕ ಬಿಜೆಪಿ ಹಿರಿಯ ನಾಯಕ, ಅಡ್ವಾಣಿ ಅವರಿಗೆ ಪ್ರಧಾನಿ ಮೋದಿ ಅವರು ತಮ್ಮ ಗುರು ಕಾಣಿಕೆ ನೀಡಿದ್ದಾರೆ.