ಕುಕನೂರು : ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಮನಸ್ಥಿತಿ ಹಾಳಾಗುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಣದ ವಿಚಾರದಲ್ಲಿ ಸಾಕಷ್ಟು ಜನರಿಗೆ ಮೋಸ ನಡೆಯುವುದು ಸಹಜವಾಗಿಬಿಟ್ಟಿದೆ. ಇದೀಗ ಟೆಲಿಗ್ರಾಮ್ ಆ್ಯಪ್ ಮೂಲಕ ಇಂತಹದ್ದೇ ಒಂದು ಘಟನೆ ಕುಕನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಕುಕನೂರು ಪಟ್ಟಣದ ಸಂಜಯ ನಗರದ ನಿವಾಸಿ ಭುವನೇಶ್ವರಿ ಶಿವಕುಮಾರ ಮುತ್ತಾಳ (28) ಎಂಬವರಿಗೆ ಹ್ಯಾಕರ್ ಬರೋಬ್ಬರಿ 21.60 ಲಕ್ಷ ವಂಚನೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಮಹಿಳೆ ಟೆಲಿಗ್ರಾಮ್ ಆ್ಯಪ್ ನಲ್ಲಿ ಪರಿಚಯವಾಗಿದೆ. ನಂತರ ಅಪರಿಚತ ವ್ಯಕ್ತಿ ಈ ಮಹಿಳೆಗೆ 1 ದಿನಕ್ಕೆ 1 ರಿಂದ 3 ಗಂಟೆ ಕೆಲಸ ಮಾಡಿದರೇ ಸಾಕು 2,600 ರಿಂದ 4,200 ರೂ.ವರೆಗೆ ಪ್ರತಿ ದಿನ ಗಳಿಸಬೇಕು ಎಂದು ಆಮೀಷ ಒಡ್ಡಿದ್ದಾನೆ. ಬಳಿಕ ಮಹಿಳೆಯ ಹಾಗೂ ಅವರ ಅಜ್ಜನ ಖಾತೆಯಿಂದ ಬರೋಬ್ಬರಿ 21,60,692 ರೂ. ಮೋಸ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.
ಕುಕನೂರು ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಕಲಂ 419, 420, ಐಪಿಸಿ ಮತ್ತು ಕಲಂ 66(ಸಿ), 66(ಡಿ) ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.