ಬಂಜಾರ, ಭೋವಿ ಹಾಗೂ ಕೊರಚ ಸಮಾಜಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಂದ ಅನ್ಯಾಯ : ಸುರೇಶ ಬಳೂಟಗಿ
ಕುಕನೂರು : “ಬಂಜಾರ ಬೋವಿ, ಕೊರಮ ಹಾಗೂ ಕೊರಚ ಸಮಾಜಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಂದ ಅನ್ಯಾಯವಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರವೂ ಸದಾಶೀವ ಆಯೋಗದ ವರದಿ ಜಾರಿ ಕುರಿತು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿ ನಮ್ಮ್ ಸಮಾಜಕ್ಕೆ ಘೋರ ಅನ್ಯಾಯ ಎಸಗಿದೆ ಎಂದು ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯಾದರ್ಶಿ ಸುರೇಶ ಬಳೂಟಗಿಹೇಳಿದರು.
ಕುಕನೂರು ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಮಾತನಾಡಿದ ಸುರೇಶ ಬಳೂಟಗಿ ಅವರು, “ಅವೈಜ್ಞಾನಿಕ ವರದಿಯಾದ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗಯ ಜಾರಿ ಕುರಿತು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದು, ಬಂಜಾರ ಬೋವಿ, ಕೊರಮ ಹಾಗೂ ಕೊರಚ ಇನ್ನುಳಿದ 97 ಜಾತಿಗಳಿಗೆ ಅನ್ಯಾಯವಾಗುವುದಂತೂ ಖಚಿತ” ಎಂದು ಹೇಳಿದರು.
“ಈ ಹಿಂದೆ ಬಿಜೆಪಿ ಸರ್ಕಾರ ಈ ವರದಿಯನ್ನು ಕೇಂದ್ರಕ್ಕೆ ಶಿಪಾರಸ್ಸು ಮಾಡಿತ್ತು, ಇದರ ಪರಿಣಾಮ ವಿಧಾನಸಭೆ ಚುನಾವಣೆಯಲ್ಲಿ ತೋರಿಸಿದ್ದೇವೆ. ಇದೀಗ ಈ ಸಾಹಸಕ್ಕೆ ಕಾಂಗ್ರೆಸ್ ಕೈಹಾಕಿದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಶಕ್ತಿ ಎನ್ನೆಂಬುವುದನ್ನು ಪ್ರದರ್ಶನ ಮಾಡಲ್ಲಿದ್ದೇವೆ. ನಮ್ಮ ಸಮಾಜ ಇನ್ನು ಸಾಮಾಜಿಕ , ಶೈಕ್ಷಣಿಕ, ಆರ್ಥಿಕವಾಗಿ ಬಹಳಷ್ಟು ಹಿಂದೆ ಉಳಿದಿದೆ. ನಮ್ಮಾಳುವ ಸರ್ಕಾರಗಳು ಇದನ್ನು ಅರಿತು ಸುಮ್ಮಾಗಬೇಕು ಇಲ್ಲವಾದರೇ, ನಮ್ಮ ಹೋರಾಟವೂ ತೀವ್ರ ಗತಿಸಾಗಲಿದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಶಿಕುಮಾರ ಬಳಗೇರಿ, ಸಮಾಜದ ಮುಖಂಡ ಕೃಷ್ಣಪ್ಪ, ಯುವ ಮುಖಂಡ ವಿಶ್ವನಾಥ್ ಕುಣಕೇರಿ ಮತ್ತಿತರರು ಇದ್ದರು.