ಕುಕುನೂರು : ಮರಳಸಿದ್ದೇಶ್ವರ ಪುಣ್ಯಶ್ರಮ ಹಾಗೂ ಕ್ಷಮಾಭಿವೃದ್ಧಿ ಸಂಘದ ವತಿಯಿಂದ 101 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಶರಣ ಗದಿಗೆ ಪಜ್ಜ ಹೇಳಿದರು.
ಪಟ್ಟಣದಲ್ಲಿ ರವಿವಾರ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ತಾಲೂಕಿನ ಇಟಗಿ ಗ್ರಾಮದ ಮರುಳಸಿದ್ದೇಶ್ವರ ಪುಣ್ಯಶ್ರಮ ಹಾಗೂ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಿವಶರಣ ಗರಿಗೆ ಪಜ್ಜನವರ ನೇತೃತ್ವದಲ್ಲಿ 101 ಜೋಡಿಗಳ ಸಾಮೂಹಿಕ ವಿವಾಹ ಹಾಗೂ ಮರುಳಸಿದ್ದೇಶ್ವರರ ದೀಪೋತ್ಸವ ಹಾಗೂ ಜಾಗರಣೆ ಕಾರ್ಯಕ್ರಮವನ್ನು ಮಾರ್ಚ್ 8ನೇ ತಾರೀಕಿನಂದು ಹಮ್ಮಿಕೊಳ್ಳಲಾಗಿದೆ.
ಈ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗಲು ಇಚ್ಛಿಸುವರು ವಯಸ್ಸಿನ ದೃಡೀಕರಣ ಆಧಾರ್ ಕಾರ್ಡ್ ವಾಸ ಸ್ಥಳ ಪ್ರಮಾಣ ಪತ್ರ ಜಾತಿ ಆದಾಯ ಹಾಗೂ ವಧು ವರರ ಎರಡು ಫೋಟೋಗಳನ್ನು ತೆಗೆದುಕೊಂಡು ಇಟಗಿ ಗ್ರಾಮದ ಮರುಳಸಿದ್ದೇಶ್ವರ ಕ್ಷೇಮಭಿವೃದ್ಧಿ ಸಂಘದ ಸದಸ್ಯರನ್ನು ಸಂಪರ್ಕಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಖರ್ಲೆಕೊಪ್ಪ, ರವಿ ಕಡೆಮನಿ, ಶರಣಪ್ಪ ಭೀಮಪ್ಪ ಗುಡದಳ್ಳಿ ಹಾಗೂ ಇತರರು ಇದ್ದರು