ಕುಕನೂರು : “ಭರತ ಖಂಡದ ಧಾರ್ಮಿಕ ಪರಂಪರೆಯ ರಾಯಭಾರಿ ಎಂದೇ ಹೆಸರುವಾಸಿ ಹಾಗೂ ಬಂಜಾರ ಸಮಾಜದ ಆರಾಧ್ಯ ದೈವ, ಮಹಾ ಗುರು ಸದ್ಗರು ಸಂತ ಶ್ರೀಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು ಎಂದು ಪ್ರಭಾರಿ ತಹಶೀಲ್ದಾರ್ ಮುರಳಿಧರ್ ಕುಲಕರ್ಣಿ ಹೇಳಿದರು.
ಇಂದು ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸದ್ಗರು ಸಂತ ಶ್ರೀ ಸೇವಾಲಾಲ್ ಮಹಾರಾಜರ 285ನೇ ಜಯಂತಿಯ ಸರಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಸೇವಾಲಾಲರು ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜಗದಾಂಬೆ ಮರಿಯಮ್ಮದೇವಿಯ ಆರಾಧಕರಾಗಿ ಇಡೀ ತಮ್ಮ ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದರು. ಇಂದಿಗೂ ಜನ ಮಾನಸದಲ್ಲಿ ಅಚ್ಚೇಳಿಯದೇ ಉಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಸುರೇಶ ಬಳೊಟಗಿ ಅವರು, “ಸದ್ಗರು ಸಂತ ಶ್ರೀ ಸೇವಾಲಾಲ್ ಮಹಾರಾಜರು ಬಂಜಾರ ಸಮಾಜ ಸರಿದಂತೆ ಎಲ್ಲರಿಗೂ ಸನ್ಮಾರ್ಗದ ಬೋಧನೆ ಮಾಡಿದರು. ಎಲ್ಲ ಸಂತ ಶರಣರು ಹೇಳಿದ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕಿದೆ” ಎಂದು ಹೇಳಿದರು.
ಈ ವೇಳೆ ಬಸ್ ಡಿಪೋ ಕಛೇರಿ ಸೇರಿದಂತೆ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಸಂಕೇತಿಕವಾಗಿ ಸಂತ ಶ್ರೀ ಸೇವಾಲಾಲ್ ಅವರ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಹಿರಿಯರಾದ ಹೂಬಪ್ಪ ಚವ್ಹಾಣ, ದೇವೇಂದ್ರಪ್ಪ ರಾಠೋಡ್, ಕುಮಾರ್ ಬಳಗೇರಿ, ಪತ್ರಕರ್ತ ಚಂದ್ರು ಭಾನಾಪುರ, ಪ್ರಕಾಶ್, ವಿಶ್ವನಾಥ್, ದುರಗೇಶ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.