ಕುಕನೂರು : ತಾಲೂಕಿನ ದ್ಯಾoಪುರ ಗ್ರಾಮದಲ್ಲಿ ಭಕ್ತ ಶ್ರೀ ಕನಕದಾಸ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ನೇತೃತ್ವದಲ್ಲಿ ದಾಸ ಶ್ರೇಷ್ಠ ಕನಕದಾಸರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಗುರುವಾರ ನಡೆಯಿತು.
ಬುದುವಾರ ಪಟ್ಟಣದ ಭೀಮಾoಭಿಕೆ ದೇವಸ್ಥಾನದಿಂದ ದ್ಯಾoಪುರ ಗ್ರಾಮದ ವರೆಗೆ ಡೊಳ್ಳು ವಾದ್ಯ, ಪೂರ್ಣ ಕುಂಭ ಮೇಳದೊಂದಿಗೆ ಕನಕ ದಾಸರ ಭವ್ಯ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಗಿತ್ತು.
ಹಾಲವರ್ತಿ ಶಿವ ಸಿದ್ದೇಶ್ವರ ಸ್ವಾಮೀಜಿಗಳು ಮೂರ್ತಿಯ ಪ್ರತಿಷ್ಠಾಪನೆ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ದೇವಪ್ಪ ಮುರಡಿ, ಗಗನ್ ನೋಟಗಾರ್, ಶೇಖಪ್ಪ ಕಂಬಳಿ, ಹೊನ್ನಪ್ಪ ಮುರಡಿ, ಯಲ್ಲಪ್ಪ ನೋಟಗಾರ್, ಹಾಲುಮತ ಸಮಾಜದ ಮುಖಂಡರು ಇದ್ದರು .