ಕುಕನೂರ್ ಪ. ಪಂ. ಮುಖ್ಯಾಧಿಕಾರಿ ಪಿ ಸುಬ್ರಮಣ್ಯ ವರ್ಗಾವಣೆ, ರವೀಂದ್ರ ಬಾಗಲಕೋಟಿ ಮತ್ತೆ ಕುಕನೂರಿಗೆ.!!!
ಕುಕನೂರು : ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಿ ಸುಬ್ರಮಣ್ಯ ಅವರ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಈ ಹಿಂದೆ ಕುಕನೂರು ಪ. ಪಂ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ರವೀಂದ್ರ ಬಾಗಲಕೋಟ ಪುನಃ ಕುಕನೂರು ಪಟ್ಟಣ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆರು ತಿಂಗಳಿಗೊಮ್ಮೆ ಈ ರೀತಿ ಅಧಿಕಾರಿಗಳ ವರ್ಗಾವಣೆ ಆಗುತ್ತಿದ್ದೂ ಇದರಿಂದ ಕುಕನೂರು ಪಟ್ಟಣದ ಅಭಿವೃದ್ಧಿಗೆ ಕುಂಠಿತವಾಗಿದೆ, ಬರಗಾಲದ ಸಮಯದಲ್ಲಿ ಹೀಗೆ ಅಧಿಕಾರಿಗಳ ಏಕಾಏಕೀ ವರ್ಗಾವಣೆಯಿಂದ ಸಾರ್ವಜನಿಕರ ಸೇವೆ ಯಲ್ಲಿ ವ್ಯಥೆಯ ವಾಗುತ್ತಿದೆ ಮೂಲಭೂತ ಸೌಲಭ್ಯಗಳ ಸೇವೆಗಳಲ್ಲಿ ತುಂಬಾ ಅನಾನುಕೂಲ ಆಗುತ್ತಿದೆ ಎಂದು ಪಟ್ಟಣದ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.