ಕುಕನೂರು : ಬಂಜಾರ ಸಮಾಜವು ಇಡೀ ವಿಶ್ವದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ಸಮಾಜವಾಗಿದೆ, ಬಂಜಾರ ಸಮಾಜದವರು ಭಕ್ತಿ, ಶ್ರಮ, ನಿಯತ್ತಿಗೆ ಹೆಸರಾದವರು ಎಂದು ಕೊಪ್ಪಳದ ಬಂಜಾರ ಧರ್ಮ ಗುರು ಶ್ರೀ ಗುರು ಗೋಸಾವಿ ಬಾವಾನವರು ಹೇಳಿದರು.
ಕುಕನೂರು ಪಟ್ಟಣದಲ್ಲಿ ಬುದುವಾರ ತಾಲೂಕು ಬಂಜಾರ ಸಮಾಜದಿಂದ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ 285 ನೇ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿ ಇಲ್ಲ ಎಂಬಂತೆ ಸಂತ ಶ್ರೀ ಸೇವಾಲಾಲ್ ರು ಮಾರಿಕಾಂಬಾ ದೇವಿಯ ಭಕ್ತಿ ಯನ್ನು ತಿರಸ್ಕರಿಸಿ ಜನ್ಮ ಕೊಟ್ಟ ತಂದೆ ತಾಯಿಯರ ಸೇವೆ ಮಾಡಿದರು, ಈ ಮೂಲಕ ಜಗತ್ತಿಗೆ ಉಪ್ಪಿನ ರುಚಿ ತೋರಿಸಿಕೊಟ್ಟರು.
ಸಂತ ಸೇವಾಲಾಲ್ ರು ಬಂಜಾರ ಸಮಾಜದ ಸುಧಾರಣೆಗೆ ಸಾಕಷ್ಟು ಮಾರ್ಗದರ್ಶನ ತೋರಿದ್ದಾರೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು, ಶಿಕ್ಷಣ ವೆಂಬುದು ಹುಲಿಯ ಹಾಲು, ಶಿಕ್ಷಣ, ಸಂಸ್ಕಾರ ಪಡೆದು ಸೇವಾಲಾಲ್ ರು ಕಂಡ ಸಮಾಜ ಸುಧಾರಣೆಯ ಕನಸನ್ನು ನನಸು ಮಾಡಬೇಕು ಎಂದು ಸದ್ಗುರು ಶ್ರೀ ಗೋಸಾವಿ ಬಾವಾ ನವರು ಹೇಳಿದರು.
ಪಟ್ಟಣದ ಅನ್ನದಾನಿಶ್ವರ ಮಠದ ಮಹದೇವ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುಕನೂರು ತಹಸೀಲ್ದಾರ್ ಅಶೋಕ್ ಶಿಗ್ಗಾವಿ ಭಾಗವಹಿಸಿ ಮಾತನಾಡಿ,
ಸೇವಾಲಾಲ್ ರು ಬುಡಕಟ್ಟು ಸಮಾಜವನ್ನು ಕಾಡಿನ ವಾಸಿಗಳಾದ ಬಂಜಾರ ಸಮಾಜವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿ, ಮಾರ್ಗದರ್ಶನ ಮಾಡಿದ ದರ್ಶನಿಕರು ಅವರ ಆಶಯ ಸಮಾಜ ಸುಧಾರಣೆ ಯಂತೆ ಒಳ್ಳೆಯ ಶಿಕ್ಷಣ ಪಡೆದು ಸಮಾಜ ಸುಧಾರಣೆಗೆ ಕೊಡುಗೆ ನೀಡಬೇಕು ಎಂದರು.
ಬಂಜಾರ ಸಮಾಜ ಸುಧಾರಕ ಸೇವಾಲಾಲ್ ರ ಕುರಿತು ವಿಶೇಷ ಉಪನ್ಯಾಸವನ್ನು ಗುರುಕುಲ ಕಾಲೇಜ್ ಉಪನ್ಯಾಸ ಕ ಸೋಮಶೇಖರ್ ನಿಲೋಗಲ್ ನೀಡಿದರು.
ಇದಕ್ಕೂ ಮುನ್ನ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ ಭಾವ ಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಮಣ್ಣ ಬಜೇಂತ್ರಿ, ರಶಿದ್ ಸಾಬ್ ಹಣಜಗಿ, ಶೀನಪ್ಪ ಚವ್ಹಾಣ, ಲಕ್ಕಪ್ಪ ನಾಯಕ್, ಮೇಘರಾಜ್ ಬಳಗೇರಿ, ಯಮನೂರಪ್ಪ ಕಟ್ಟಿಮನಿ, ಸುರೇಶ್ ಬಳೂಟಗಿ, ಹಂಪಣ್ಣ ಕಟ್ಟಿಮನಿ, ಕುಮಾರ್ ಬಳಗೇರಿ ಬಸವಂತಪ್ಪ ನಾಯಕ್, ಯಲ್ಲಪ್ಪ ಮನ್ನಾಪುರ, ಮೌನೇಶ್ ಲಮಾಣಿ, ರಾಜಕುಮಾರ್ ರಾಠೋಡ್, ಚಂದ್ರು ಬಾಣಾಪುರ ಸೇರಿದಂತೆ ಬಂಜಾರ ಸಮಾಜದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.