ಕುಕನೂರು : ಇತ್ತೀಚಗೆ ಕುಕನೂರು ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಸಿಗ್ಬಂದಿಗಳ ವಿರುದ್ಧ ಭ್ರಷ್ಟಾಚಾರದ ಹಾಗ ಕರ್ತವ್ಯ ಲೋಪದ ಆರೋಪವೂ ಕೇಳಿ ಬಂದಿತ್ತು. ಇದೀಗ ಪಟ್ಟಣ ಪಂಚಾಯತ್ ಸಿಗ್ಬಂದಿಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಫಾರಂ ನಂ 3 ನಮೂನೆಯ ಸಲುವಾಗಿ 2,000 ರೂಪಾಯಿಗೆ ಪಟ್ಟಣ ಪಂಚಾಯತ್ ಸಿಗ್ಬಂದಿ ಜಗದೀಶ ಎಂಬಾತ ಇದೇ ಪಟ್ಟಣದ ಕೋಳಿಪೇಟೆಯ ವ್ಯಾಪಾರಿ ನಾಗಪ್ಪ ಕಡೆಯಿಂದ ಬೇಡಿಕೆ ಇಟ್ಟಿದ್ದನು ಎಂದು ಆರೋಪಿಸಲಾಗಿತು. ಇಂದು ಹಣವನ್ನು ಕೊಡುವ ಸಂದರ್ಭದಲ್ಲಿ ಸಿಗ್ಬಂದಿ ಜಗದೀಶ್ ಗೆ ಲೋಕಾಯುಕ್ತ ಪೊಲೀಸರು ವಶಪಡೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪಟ್ಟಣ ಪಂಚಾಯತ್‌ನಲ್ಲಿ ಜಗದೀಶ ಅವರನ್ನು ವಿಚಾರಣೆ ನಡೆಸಿ ತನಿಖೆಗೆ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಪಂಚಾಯತ್ ಕಾರ್ಯಾಲಯದಲ್ಲಿ ಇನ್ನು ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.