ತೆರಿಗೆ ಹಂಚಿಕೆ ಹಣ, ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ 5183 ಕೋಟಿ ರೂ ಹೆಚ್ಚುವರಿ ಫಂಡ್ ಬಿಡುಗಡೆ !!!
ಕೇಂದ್ರ ಹಣಕಾಸು ಮಂತ್ರಾಲಯವು ವಿವಿಧ ರಾಜ್ಯಗಳಿಗೆ ಸಾಮಾಜಿಕ ಕಲ್ಯಾಣ, ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳ ಫೆಬ್ರವರಿ ತಿಂಗಳ ಒಟ್ಟು 1,42,122 (ಒಂದು ಲಕ್ಷ ನಲವತ್ತೆರಡು ಸಾವಿರದ ಒಂದು ನೂರಾ ಇಪ್ಪತ್ತೆರಡು) ಕೋಟಿ ರೂ ತೆರಿಗೆ ಹಂಚಿಕೆ ಹಣವನ್ನು ವಿವಿಧ ರಾಜ್ಯಗಳಿಗೆ ಇಂದು ಬಿಡುಗಡೆ ಮಾಡಿದೆ.
ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ಗುಜರಾತ್ ರಾಜ್ಯಕ್ಕಿಂತಲೂ ಹೆಚ್ಚಿನ ತೆರಿಗೆ ಹಂಚಿಕೆಯ ವಂತಿಕೆ ದೊರೆತಿದೆ. ಕರ್ನಾಟಕಕ್ಕೆ 5183 ಕೋಟಿ ರೂ ಸಿಕ್ಕಿದ್ದರೆ, ಅದೇ ಗುಜರಾತ್ ರಾಜ್ಯಕ್ಕೆ 4943 ಕೋಟಿ ರೂ ವಂತಿಕೆ ಬಿಡುಗಡೆಯಾಗಿದೆ.
ಬಿಹಾರ್ ರಾಜ್ಯಕ್ಕೆ 14,295 ಕೋಟಿ ಬಂಪರ್ ವಂತಿಕೆ ಸಿಕ್ಕಿದೆ, ಮಧ್ಯಪ್ರದೇಶಕ್ಕೆ 11,157 ಕೋಟಿ, ಆಂಧ್ರಪ್ರದೇಶಕ್ಕೆ 5752 ಕೋಟಿ ರೂ ಸಿಕ್ಕಿದೆ. ಒಟ್ಟು 1,42,122 ಕೋಟಿ ರೂ ಫೆಬ್ರವರಿ ತಿಂಗಳ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿ ಕೇಂದ್ರ ಹಣಕಾಸು ಇಲಾಖೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಕಳೆದ ವಾರ ಕರ್ನಾಟಕ,ಕೇರಳ, ತಮಿಳುನಾಡು ಒಳಗೊಂಡ ದಕ್ಷಿಣ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ತೆರಿಗೆ ತಾರತಮ್ಯ ಖಂಡಿಸಿ ಪ್ರತಿಭಟನೆ ಮಾಡಿದ್ದವು.!!!!