ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್ ಮಿಸ್.!! ಡಾ. ಕೆ ಬಸವರಾಜ್ ಗೆ ಚಾನ್ಸ್!!
ಕೊಪ್ಪಳ : ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದ್ದು ಕೊಪ್ಪಳ ಲೋಕಸಭೆ ಟಿಕೆಟ್ ಕೈತಪ್ಪಿದೆ.
ರಾಜ್ಯದ 20 ಕ್ಷೇತ್ರಗಳ ಟಿಕೆಟ್ ಅನ್ನು ಬಿಜೆಪಿ ಇಂದು ಸಂಜೆ ಬಿಡುಗಡೆ ಮಾಡಿದ್ದು ಅದರಲ್ಲಿ 9 ಜನ ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲಿಗೆ ಖ್ಯಾತ ವೈದ್ಯ ಡಾ. ಕೆ. ಬಸವರಾಜ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.
ಮಾಜಿ ಶಾಸಕ ಕೆ. ಶರಣಪ್ಪ ಅವರ ಪುತ್ರ, ಕೊಪ್ಪಳ ನಗರದ ಕೆ ಎಸ್ ಆಸ್ಪತ್ರೆ ವೈದ್ಯ ಡಾ. ಕೆ. ಬಸವರಾಜ್ ಅವರಿಗೆ ಈ ಬಾರಿ ಕೊಪ್ಪಳ ದಿಂದ ಬಿಜೆಪಿ ಟಿಕೆಟ್ ಸಿಕ್ಕಿದೆ.
ಇದಕ್ಕಿಂತ ಹೆಚ್ಚಾಗಿ ವೈದ್ಯ ಡಾ. ಕೆ. ಬಸವರಾಜ್ ಅವರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾಹ ಅವರ ಪುತ್ರ ಜಯ್ ಶಾಹ ಅವರ ಆತ್ಮೀಯ ಸ್ನೇಹಿತರು ಎಂದು ಹೇಳಲಾಗಿದ್ದು. ಈ ಒಂದು ಕಾರಣವೂ ಡಾ ಕೆ ಬಸವರಾಜ್ ಅವರಿಗೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಪ್ರಮುಖ ಅಂಶ ಎಂದು ಅಂದಾಜಿಸಲಾಗಿದೆ.
ಇತ್ತ ಕಾಂಗ್ರೆಸ್ ಪಕ್ಷದ ಹುರಿಯಾಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ರಾಜಶೇಖರ್ ಹಿಟ್ನಾಳ್ ಅವರು ಡಾ ಕೆ ಬಸವರಾಜ್ ಅವರಿಗೆ ಎದುರಾಳಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.