ಲೋಕಸಭೆ ಚುನಾವಣೆಗೆ ಶನಿವಾರವೇ ಮುಹೂರ್ತ ಫಿಕ್ಸ್.. ನಾಳೆಯಿಂದಲೇ ನೀತಿ ಸಂಹಿತೆ ಜಾರಿ ಸಾಧ್ಯತೆ..??

ಲೋಕಸಭೆ ಚುನಾವಣೆಗೆ ಶನಿವಾರವೇ ಮುಹೂರ್ತ ಫಿಕ್ಸ್.. ನಾಳೆಯಿಂದಲೇ ನೀತಿ ಸಂಹಿತೆ ಜಾರಿ..??

2024 ರ ಲೋಕಸಭಾ ಚುನಾವಣೆಗೆ ನಾಳೆ ಶನಿವಾರ ಮಾರ್ಚ್ . 16 ರಂದೇ ಮುಹೂರ್ತ ನಿಗದಿಯಾಗಲಿದ್ದು ನಾಳೆಯಿಂದಲೇ ನೀತಿ ಸಂಹಿತೆ ಜಾರಿಯಾಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.

ಈ ಕುರಿತಂತೆ ಭಾರತೀಯ ಚುನಾವಣೆ ಆಯೋಗ ನಾಳೆ ಶನಿವಾರ ಮದ್ಯಾಹ್ನ 1.30 ಗಂಟೆಯಿಂದ ಸುದ್ದಿಗೋಷ್ಠಿ ಕರೆದಿದ್ದು 2024 ರ ಸರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ.

ಕೇಂದ್ರ ಚುನಾವಣೆ ಆಯೋಗದ ಜಂಟಿ ನಿರ್ದೇಶಕ ಚಂದಕ್ ಅವರು ನಾಳೆ ಮದ್ಯಾಹ್ನ ನಡೆಯುವ ಮಾಧ್ಯಮ ಗೋಷ್ಠಿಗೆ ಪ್ರಕಟಣೆ ಹೊರಡಿಸಿದ್ದು ದೆಹಲಿಯ ವಿಜ್ಞಾನ ಭವನದಲ್ಲಿ ಮದ್ಯಾಹ್ನ 1.30 ರಿಂದ ಕೇಂದ್ರ ಚುನಾವಣೆ ಆಯೋಗ 2024 ರ ಲೋಕಸಭೆ ಮತ್ತು ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ.

  • ದಿನಾಂಕ ಘೋಷಣೆಯಾದ ಮರು ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗುವುದು ಎಂಬ ಮಾಹಿತಿ ಇದೆ.

ವರದಿ : ಪ್ರಜಾವೀಕ್ಷಣೆ ಸುದ್ದಿ ಜಾಲ.

Leave a Reply

error: Content is protected !!