ಕೊಪ್ಪಳ : 2024 ರ ಲೋಕಸಭೆ ಟಿಕೆಟ್ ಸಿಗದ ಹಿನ್ನೆಲೆ ಇಂದು ಕೊಪ್ಪಳದ ತಮ್ಮ ನಿವಾಸದಲ್ಲಿ ದಿಡೀರ್ ಸುದ್ದಿ ಗೋಷ್ಠಿ ನಡೆಸಿದ ಸಂಗಣ್ಣ ಕರಡಿ ತಮ್ಮ ಮುಂದಿನ ರಾಜಕೀಯ ನಡೆ, ಕಾರ್ಯತಂತ್ರದ ಬಗ್ಗೆ ನಾಡಿದ್ದು ಮಾರ್ಚ್ಗು 21 ಗುರುವಾರ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಸಭೆ ಕರೆದಿದ್ದು ಅಂದಿನ ದಿನ ಎಲ್ಲ ನಾಯಕರು, ಅಭಿಮಾನಿಗಳು, ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ರಾಜಕೀಯ ಕಾರ್ಯತಂತ್ರ ದ ಬಗ್ಗೆ ಯೋಚಿಸಲಾಗುವುದು ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.
ಈ ಮೂಲಕ ಬಿಜೆಪಿ ಹೈಕಮಾಂಡ್ ಮತ್ತು ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರದ ಮೊರೆ ಹೋಗಿದ್ದಾರೆ. ಇಂದಿನ ಸುದ್ದಿಗೋಷ್ಟಿಯಲ್ಲಿ ತಮಗೆ ಟಿಕೆಟ್ ತಪ್ಪುವಲ್ಲಿ ಕೆಲವು ಮಾಜಿಗಳ ಮಸಲತ್ತಿನ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
ಗುರುವಾರ ಕೊಪ್ಪಳ ನಗರದಲ್ಲಿ ನಡೆಯುವ ಅಭಿಮಾನಿಗಳು, ಕಾರ್ಯಕರ್ತರ ಸಭೆ ನಂತರ ಸಂಗಣ್ಣ ಕರಡಿ ಅವರ ಮುಂದಿನ ರಾಜಕೀಯ ಭವಿಷ್ಯದ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.
ಲಕ್ಷ್ಮಣ್ ಸವದಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ತಮಗೆ ಫೋನ್ ಮಾಡಿ ಮಾತಾಡಿದ್ದಾರೆ. ಆದರೆ ಇದುವರೆಗೂ ಯಾರೂ ಕೂಡಾ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಅಹ್ವಾನ ವಾಗಲಿ, ಟಿಕೆಟ್ ನೀಡುವ ಆಶ್ವಾಸನೆಯಾಗಲಿ ಯಾವೊಬ್ಬ ಕಾಂಗ್ರೆಸ್ ನಾಯಕರು ತಮಗೆ ನೀಡಿಲ್ಲ ಎಂದು ಕರಡಿ ಸಂಗಣ್ಣ ಹೇಳಿದ್ದಾರೆ.
ಕ್ಷೇತ್ರದಲ್ಲಿ ಈ ಹಿಂದೆ ಯಾರೂ ಮಾಡಲಾರದಷ್ಟು ಅತ್ಯುತ್ತಮ ಕೆಲಸ ಮಾಡಿದ್ದರು ಕೂಡಾ ಟಿಕೆಟ್ ಕೈ ತಪ್ಪಿದ್ದು ತೀವ್ರ ನೋವು ತಂದಿದೆ ಎಂದಿರುವ ಸಂಗಣ್ಣ ಕರಡಿಯವರು
ಕಾದು ನೋಡುವ ತಂತ್ರ, ಇಲ್ಲವೇ ಒತ್ತಡ ತಂತ್ರದ ಮೂಲಕ ಮತ್ತೆ ಬಿಜೆಪಿ ಕೊಪ್ಪಳ ಟಿಕೆಟ್ ತಮಗೆ ಸಿಗುವ ಆಶಭಾವನೆ ಒಳಗೊಳಗೇ ಇಟ್ಟುಕೊಂಡಂತಿದೆ. ಎಲ್ಲವೂ ಗುರುವಾರದ ಸಭೆ ನಂತರ ಎಲ್ಲವೂ ಗೊತ್ತಾಗಲಿದೆ. ಬಿಜೆಪಿ ಪಕ್ಷದಲ್ಲಿ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಿ ಫಾರಂ ಮೊದಲು ಒಬ್ಬರಿಗೆ ಘೋಷಣೆಯಾಗಿ ನಂತರ ಬೇರೊಬ್ಬರಿಗೆ ಕೊಟ್ಟ ಉದಾಹರಣೆ ಇದೆ. ಹಾಗಾಗಿ ಸಂಸದ ಸಂಗಣ್ಣ ಕರಡಿ ಅವರಿಗೆ ಪುನಃ ಕೊಪ್ಪಳ ಬಿಜೆಪಿ ಟಿಕೆಟ್ ಸಿಗಲಿದೆ ಎಂಬುದು ಅವರ ಅಭಿಮಾನಿಗಳ ಆಶಾವಾದ ಮತ್ತು ಭರವಸೆ ಇಟ್ಟುಕೊಂಡಿದ್ದಾರೆ.
ವರದಿ : ಈರಯ್ಯ ಕುರ್ತಕೋಟಿ.