ಕೊಪ್ಪಳ: ಏಪ್ರಿಲ್.01. ಸಂಜೀವಿನಿ ಸಂಯೋಗದಲ್ಲಿ ಎಸ್ ಆರ್ ಎಲ್ ಎಂ ಕೃಷಿ ಸಖಿವರಿಗೆ ಐದು ದಿನದವರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಕೃಷಿ ವಿಸ್ತಾರಣ ಶಿಕ್ಷಣ ಕೇಂದ್ರ ,ಕೊಪ್ಪಳದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಸ್ತರಣಾ ಮುಂದಾಳು ಡಾಕ್ಟರ್ ಎಂ. ವಿ . ರವಿ ರವರು ವಹಿಸಿಕೊಂಡು ಮಾತನಾಡುತ್ತಾ, ಮಹಿಳೆಯರು ನೈಸರ್ಗಿಕ ಕೃಷಿ ಕುರಿತು ತರಬೇತಿ ಪಡೆದಿದ್ದನ್ನು ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಬೇಕು ಮತ್ತು ವಿಷಮುಕ್ತ ಹಾಗೂ ರಾಸಾಯನಿಕ ಮುಕ್ತ ಆಹಾರ ಉತ್ಪಾದನೆ ಕಡೆಗೆ ಹೆಚ್ಚಿನ ಗಮನಕೊಡಬೇಕು ಮತ್ತು ಮಾರುಕಟ್ಟೆ ಆದರಿಸಿ ಬೆಳೆಗಳನ್ನು ಬೆಳೆಯಬೇಕು ಎಂದು ಈ ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಕೊಪ್ಪಳ ಜಿಲ್ಲೆಯ ಸರ್ವೋದಯ ಸಮಗ್ರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ದೇಸಾಯಿ ಇವರು ಮಾತನಾಡಿ ಮಹಿಳೆಯರು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಇತರರಿಗೂ ತಾಂತ್ರಿಕ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
ನಂತರ ವಾಮನ ಮೂರ್ತಿ, ಸಹಾಯಕ ಪ್ರಾಧ್ಯಾಪಕರು ಈ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಶರಣಪ್ಪ ಯುವ ವೃತ್ತಿ ಪರರು, ತಾಲೂಕ ಪಂಚಾಯಿತಿ ಕೊಪ್ಪಳ, ಪ್ರಗತಿಪರ ಸಾವಯವ ರೈತರಾಗಿ ಗುರುತಿಸಿಕೊಂಡ ಶ್ರೀ ಬಸವರಾಜ ಸಜ್ಜನ ಅಲ್ಲದೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.