ಕನಕಗಿರಿ : ಪಟ್ಟಣದ ಐತಿಹಾಸಿಕ ಕನಕಾಚಲಪತಿ ದೇಗುಲದ ಜಾತ್ರೆ ನಿಮಿತ್ತ ಸೋಮವಾರ ದೇಗುಲಕ್ಕೆ ಆಗಮಿಸಿದ ಭಕ್ತಾದಿಗಳಿಗೆ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ವೇಳೆ ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಚಂದ್ರಶೇಖರ್ ಬಿ ಕಂದಕೂರ್ ಅವರು ಮಾತನಾಡಿ, ಚುನಾವಣೆ ದಿನದಂದು ನಾವು ಸಮಯ ವ್ಯರ್ಥ ಮಾಡದೇ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಪ್ರತಿ ಕುಟುಂಬದಲ್ಲಿರುವ 18 ವರ್ಷ ಮೇಲ್ಪಟ್ಟ ಸದಸ್ಯರು ಮತದಾನ ಬಗ್ಗೆ ತಾತ್ಸಾರ ಮನೋಭಾವ ತಾಳದೇ ನಿರಾಂತಕವಾಗಿ ಮತ ಚಲಾಯಿಸಲು ಪ್ರೇರೆಪಣೆ ಮಾಡಬೇಕೆಂದು ತಿಳಿಸಿದರು.
ಪ್ರತಿ ಮತ ದೇಶಕ್ಕೆ ಹಿತ ಎನ್ನುವಂತೆ ಮತದಾನದಿಂದ ದೂರ ಉಳಿಯಬಾರದು. ಪ್ರತಿ ಮತವು ನಿರ್ಣಾಯಕವಾಗಿದೆ ಎಂದರು. ಮತದಾನದ ಬಗ್ಗೆ ತಾತ್ಸಾರ ಮನೋಭಾವ ತಾಳದೇ ಖುಷಿಯಿಂದ ನಿಮ್ಮ ಮತಗಟ್ಟೆಗೆ ಹೋಗಿ ಮತ ಚಲಾಯಿಸಿರಿ. ಯಾವುದೇ ರೀತಿಯ ಆಸೆ, ಅಮಿಷಗಳಿಗೆ ಒಳಗಾಗದೇ ನಿರ್ಭಯವಾಗಿ ಮತ ಚಲಾಯಿಸಿರೆಂದು ಕರೆ ನೀಡಿದರು.
ಈ ವೇಳೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ತಾಲೂಕು ಸ್ವೀಪ್ ಸಮಿತಿಯ ಸದಸ್ಯರಾದ ವೆಂಕೋಬ, ಶಿವಕುಮಾರ್ ಕೆ, ಪ್ರಕಾಶ ಸೇರಿದಂತೆ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.