LOCAL NEWS : ತಾಲೂಕಿನಲ್ಲಿ ಭಾರೀ ಮಳೆ : ಕುಕನೂರು ಪಟ್ಟಣದ ಅಂಗಡಿಮುಂಗಟ್ಟುಗಳ ಒಳಹೊಕ್ಕ ಚರಂಡಿ ನೀರು..!

You are currently viewing LOCAL NEWS : ತಾಲೂಕಿನಲ್ಲಿ ಭಾರೀ ಮಳೆ : ಕುಕನೂರು ಪಟ್ಟಣದ ಅಂಗಡಿಮುಂಗಟ್ಟುಗಳ ಒಳಹೊಕ್ಕ ಚರಂಡಿ ನೀರು..!

ಕುಕನೂರು : ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಇದರಿಂದ ರೈತರಲ್ಲಿ ಹಾಗೂ ಸುಡು ಬೇಸಿಗೆಯಲ್ಲಿ ಕೇಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೂಖದಲ್ಲಿ ಮಂದಹಾಸ ಮೂಡಿದೆ. ಇತ್ತ ಕುಕನೂರು ಪಟ್ಟಣದ ಜನರು ಅವೈಜ್ಞಾನಿಕ ಚರಂಡಿಗಳಿಂದ ಸಮಸ್ಯೆ ಎದರಿಸುತ್ತಿದ್ದಾರೆ. ಪಟ್ಟಣದ ಬಹುತೇಕ ಪ್ರಮುಖ ಬೀದಿಗಳ ಚರಂಡಿಗಳು ಮಳೆ ನೀರಿಂದ ತುಂಬಿ ರಸ್ತೆಯಲ್ಲಿ & ಅಂಗಡಿಮುಂಗಟ್ಟುಗಳ ಒಳಹೊಕ್ಕ ತ್ಯಾಜ್ಯ ನೀರು ಹರಿದಾಡುತ್ತಿದ್ದು, ಈ ಅವೈಜ್ಞಾನಿಕ ಚರಂಡಿಗಳಿಂದ ಜನರು ಹಾಗೂ ವಾಹನ ಸವಾರರರು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಉಂಟಾಗುತ್ತದೆ. ಇತ್ತ ಪಟ್ಟಣ ಪಂಚಾಯತ್ ಅಧಿಕಾರಿ ವರ್ಗದವರಿಗೂ ಗೊತ್ತಿದ್ದರೂ ಗೊತ್ತಿಲ್ಲದ ಹಾಗೇ ಇದ್ದಾರೆ. ಇದರಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ. ಪ್ರತಿ ವರ್ಷವೂ ಮಳೆ ಸುರಿದಾಗಲೂ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದೆ. ಇನ್ನೇನೂ ಮಳೆಗಾಲ ಆರಂಭವಾಗಿದ್ದು, ಈ ಸಮಸ್ಯೆಯನ್ನು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!