ಕುಕನೂರ : ತಾಲೂಕಿನ ಚಿಕೆನಕೊಪ್ಪದಲ್ಲಿ ಕುರಿಗಾಯಿ ಒಬ್ಬರು ಗುರುವಾರ ಸಂಜೆ ಕುರಿ ಮೇಯಿಸಲು ಹೋದಾಗ ಗಿಡ ಕಡಿಯುವಾಗ ಪಕ್ಕದಲ್ಲಿಯೇ ಹಾದು ಹೋಗಿರುವ ವಿಂಡ್ ಪವರ್ ನ 440 kv ಯತಂತಿ ತಗುಲಿ ಸುಮಾರು 55 ವರ್ಷದ ವೀರಪ್ಪ ಕುರಿ ಎಂಬುವರು ಮೃತಪಟ್ಟಿದ್ದಾರೆ.
- ಗುರುವಾರ ಸಂಜೆ ಕುರಿಗಾಯಿ ಮನೆಗೆ ಬಾರದೆ ಇದ್ದಾಗ ಹುಡುಕಾಟ ಮಾಡಿದ್ದಾರೆ. ರಾತ್ರಿ 12ಗಂಟೆ ಸುಮಾರಿಗೆ ಕುರಿಗಾಯಿ ವೀರಪ್ಪ ಕುರಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಗಿಡ ಕಡಿಯಲು ಬಳಸಿದ್ದ ಕೊಡಲಿ ಗಿಡದಲ್ಲಿಯೇ ಇದೆ.
ವಿಷಯ ತಿಳಿದು ಸ್ಥಳಕ್ಕೆ ತಹಶೀಲ್ದಾರ ಅಶೋಕ ಶಿಗ್ಗಾಂವಿ, ಸಿಪಿಐ ಮೌನೇಶ್ವರ ಪಾಟೀಲ,ಪಿಎಸ್ಐ ಟಿ, ಗುರುರಾಜ, ಗ್ರಾಮ ಲೆಕ್ಕಿಗ ಹಾಗೂ ಗ್ರಾಮಸ್ಥರು ಸ್ಥಳದಲ್ಲಿಯೇ ಇದ್ದಾರೆ.
ಅದರೆ ಇದುವರೆಗೂ ವಿಂಡ್ ಪವರ್ ಕಂಪನಿ ಯವರು ಇತ್ತ ಕಡೆ ಬಂದಿಲ್ಲ. ಗ್ರಾಮಸ್ಥರು ಹಾಗೂ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿದ್ದು ಕಂಪನಿಯವರು ಬರುವವರೆಗೂ ನಾವು ಮೃತ ದೇಹವನ್ನು ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ವಿಂಡ್ ಕಂಪನಿಯವರು ಬೇಕಾ ಬಿಟ್ಟಿಯಾಗಿ ವಿದ್ಯುತ್ ಕಂಬಗಳು ಅಳವಡಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ವಿಂಡ್ ಕಂಪನಿಯ ವಿದ್ಯುತ್ ಕಂಬದಿಂದ ಸಾವು ಸಂಭವಿಸಿದರೂ ಸಹಿತ ಇದೂವರೆಗೂ ಕಂಪನಿ ಕಡೆಯಿಂದ ಯಾರು ಬರದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.