ಪ್ರಜಾ ವೀಕ್ಷಣೆ ಸುದ್ದಿ ಜಾಲ
ಕುಕನೂರು : ಬಡತನದ ಮಧ್ಯಯೂ ಶಿಕ್ಷಣವನ್ನು ನಿಲ್ಲಿಸದೆ, ಹಾಸ್ಟೆಲ್‌ನಲ್ಲಿ ಇದ್ದು ಕೊಂಡು ಬಂಜಾರ ಸಮಾಜದ ಬಾಲಕ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.91.52 ಫಲಿತಾಂಶವನ್ನು ಪಡೆದುಕೊಳ್ಳುವ ಮೂಲಕ ಇಡೀ ತಾಂಡಾಕ್ಕೆ ಮಾದರಿಯಾಗಿದ್ದಾನೆ.

ಶಶಿಕುಮಾರ್ ಕುಕನೂರು ಪಟ್ಟಣದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇದೆ ತಾಲೂಕಿನ ಕಕ್ಕಿಹಳ್ಳಿ ತಾಂಡಾದ ವೀರಪ್ಪ ಕಾರಬಾರಿ ಹಾಗೂ ರೇಣವ್ವ ದಂಪತಿಗಳ ಮಗನಾದ ಶಶಿಕುಮಾರ್ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದನು.
ಮಗನ್ನು ಓದಿಸಬೇಕೆಂಬ ಹಂಬಲದಿಂದ ತಂದೆ-ತಾಯಿಗಳಿಬ್ಬರು ಸಹಿತ ಮಗನ ವಿದ್ಯಾಭ್ಯಾಸ ಹಾಗೂ ಕುಟುಂಬ ನಿರ್ವಹಣೆಗಾಗಿ ಮನೆ ಮನೆಗೆ ಪುಟ್ಟಿ ಹೊತ್ತು ಕೊಂಡು ಹೋಗಿ ತರಕಾರಿಯನ್ನು ಮಾರಾರುತ್ತಾ ಬಂದಿದ್ದಾರೆ. ಮಗ ಶಶಿಕುಮಾರನು ಸಹಿತ ತಂದೆ ತಾಯಿಗಳ ಆಸೆಯಂತೆ ಉತ್ತಮ ವಿದ್ಯಾಭ್ಯಾಸವನ್ನು ಮಾಡಿದ್ದು, ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದು ತಾಂಡಕ್ಕೆ ಮಾದರಿಯಾಗಿದ್ದಾನೆ.

ಶಶಿಕುಮಾರ್ ಓದುವರ ಓದುವದರ ಜೊತೆಗೆ ಆಟೋಟಗಳಲ್ಲಿ ಕೂಡ ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದ, ಈಗಾಗಲೇ ಈ ಹಿಂದೆ ನಡೆದಂತ ಎಲ್ಲಾ ಕ್ರೀಡಾಪಟುಗಳಲ್ಲಿ ಗುಂಡು ಎಸೆತ-ಚಕ್ರ ಎಸೆತ ತನ್ನಿಷ್ಟದ ಆಟಗಳಲ್ಲಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದಾನೆ.
ಇತ್ತೀಚಿಗೆ ಮೂಡುಬಿದ್ರೆಯ ಆಳ್ವಾಸ್ ಕಾಲೇಜ್ ನಲ್ಲಿ ನಡೆದ ರಾಜ್ಯಮಟ್ಟದ ಸ್ಟೇಟ್ ಲೆವೆಲ್ ಸೆಲೆಕ್ಷನ್‌ಗೆ ಹೋಗಿದ್ದನು ಎನ್ನಲಾಗಿದೆ. ಆದರೆ ಇದರ ಫಲಿತಾಂಶ ಇನ್ನು ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿದೆ.
ಶಶಿಕುಮಾರ್ ಇತ್ತಿಚಿಗೆ ನೆಡೆದ ಶಾಲಾ ಕ್ರಿಡಾಕೂಟದಲ್ಲಿಯೂ ಸಹಿತ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದನು.