Missing case: ಬಾಲಕ ನಾಪತ್ತೆ ; ಪ್ರಕರಣ ದಾಖಲು

ಕುಕನೂರು :   ತಾಲೂಕಿನ ಬಿನ್ನಾಳ ಗ್ರಾಮದ ಕಳಕಪ್ಪ ಚಿಂತಾಮಣಿ ಎಂಬುವರ ಮಗ ಜಗದೀಶ (16) ಚಿಂತಾಮಣಿ ಎಂಬುವರು ನಾಪತ್ತೆಯಾಗಿರುವ (ಅಪಹರಣ) ಕುರಿತು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಜಗದೀಶ ಮೂಲಃ ಬಿನ್ನಾಳ ಗ್ರಾಮದವನಾಗಿದ್ದು, ಶಾಲೆಗಳು ರಜೆ ಇವರುವುದರಿಂದ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಸಂಬoಧಿಕರ ಮೇನೆಗೆ ಹೋಗಿದ್ದ. ಮೇ 7 ರಂದು ಮದ್ಹಾನ್ನ ಊಟ ಮಾಡಿ 1.30 ರ ಸುಮಾರಿಗೆ ಹೊರಗೆ ಹೊದವನು ತಿರುಗಿ ಮನಗೆ ಬರದೆ ಇದ್ದಾಗ, ಮನೆಯವರು ಅಕ್ಕ-ಪಕ್ಕದ ಊರುಗಳಲ್ಲಿ ಹಾಗೂ ಸಂಬAಧಿಕರನ್ನು ವಿಚಾರಿಸಿದ್ದಾರೆ. ಮಗ ಎಲ್ಲೂ ಸಿಗದಿದ್ದಾಗ ನಾಪತ್ತೆಯಾದ ಬಾಲಕ ತಂದೆ ಹಾಗೂ ಆತನ ಮಾವ ಸೇರಿಕೊಂಡು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಜಗದೀಶನ್ನು(16) ಅಪಹರಿಸಿದ್ದಾರೆ ಹುಡಿಕಿಕೊಡಿ ಎಂದು ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಕುರಿತು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಾಲಕನ ಪತ್ತೆಗೆ ಪ್ರಕಟಣೆಯನ್ನು ನೀಡಿರುತ್ತಾರೆ.

ಪೋಟೊದಲ್ಲಿರುವ ಬಾಲಕ ಸುಳಿವು ಸಿಕ್ಕಲ್ಲಿ ಈ ಕೆಳಗಿನ ವಿಳಾಸಕ್ಕೆ ಸಂರ್ಪಕಿಸುವoತೆ ಕೋರಿದ್ದಾರೆ.

1. PSI KOPPAL 1.RURAL P.S08539-221333. 9480803746.
2. CPI KOPPAL RURAL -9480803731.
3. DY.S.P KOPPAL-08539-230111.
4. DIST CONTROL ROOM KOPPAL-08539-230222-100.

Leave a Reply

error: Content is protected !!