ಕಾರಟಗಿ : ಹುಬ್ಬಳ್ಳಿ ನಗರದ ವೀರಾಪೂರ ಓಣಿಯ ಅಂಬಿಗೇರ ಸಮುದಾಯದ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ಗೈದು ಪರಾರಿಯಾದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋಲಿ ಕಬ್ಬಲಿಗ ಸಮಾಜದ ಸಂಘಟನಾ ಕಾರ್ಯದರ್ಶಿ ಶರಣಪ್ಪ ಕಾಯಿ ಗಡ್ಡಿ ಹಾಗೂ ನಮ್ಮ ನಾಡ ರಕ್ಷಣಾ ವೇದಿಕೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಶರಣಪ್ಪ ಸಂಗಟಿ. ಆಗ್ರಹಿಸಿದ್ದಾರೆ
ಬಳಿಕ ಜಂಟಿಯಾಗಿ ಮಾತನಾಡಿದ ರಾಜ್ಯ ಯುವ ಘಟಕದ ಅಧ್ಯಕ್ಷ ಶರಣಪ್ಪ ಸಂಗಟಿ ಹಾಗೂ ಶರಣಪ್ಪ ಕಾಯಿ ಗಡ್ಡಿ ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಮತ್ತೊಬ್ಬ ಯುವತಿ ಬಲಿಯಾಗಿದ್ದಾಳೆ ಕೋಲಿ ,ಕಬ್ಬಲಿಗ, ಅಂಬಿಗ,ಭೋಯಿ,ಬೆಸ್ತ ಸಮಾಜದ ಯುವತಿಯ ಅಂಜಲಿ ಬರ್ಬರವಾಗಿ ಹತ್ಯೆ ಗೈದಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ ಅಂಬಿಗೇರ್ . ಹುಬ್ಬಳ್ಳಿ ನಗರದ ವೀರಾಪುರ ಓಣಿ ಗುಡಿಓಣಿ ನಿವಾಸಿಯಾದ ಅಂಜಲಿ ಅಂಬಿಗೇರ (20) ಹತ್ಯೆಗೀಡಾದ ಯುವತಿ ಅಂಜಲಿ ಅಂಬಿಗೇರ್ ಈಕೆಗೆ ಪಕ್ಕದ ಬಡಾವಣೆಯ ಯುವಕ (ಪಾಗಲ್ ಪ್ರೇಮಿ) ಗಿರೀಶ್ ಸಾವಂತ (21) ಎಂಬ ಯುವಕ ಪ್ರೀತಿಸುವಂತೆ ದುಂಬಾಲ ಬಿದ್ದಿದರಿಂದ ಅಂಜಲಿ ಅಂಬಿಗೇರ್ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ ಬುಧವಾರ ಬೆಳ್ಳಂ 2 ಬೆಳಿಗ್ಗಿನ ಜಾವ ಸರಿ ಸುಮಾರು 5: 30 ರ ಸುಮಾರಿಗೆ ಯುವತಿ ಅಂಜಲಿ ಅಂಬಿಗೇರ್ ಮನೆಯ ಹತ್ತಿರ ಬಂದು ಬಾಗಿಲು ಬಡಿದು ಎಬ್ಬಿಸಿ ನಿದ್ರಾಾವಸ್ಥೆಯಲ್ಲಿದ್ದ ಯುವತಿಯನ್ನು ಕೈ ಹಿಡಿದು ಎಳೆದು ಚಾಕುವಿನಿಂದ ಕತ್ತು,ಹೊಟ್ಟೆ ಭಾಗಕ್ಕೆ ಬಲವಾಗಿ ಚುಚ್ಚಿ ಚುಚ್ಚಿ ಹತ್ಯೆಮಾಡಿರುವ ಆರೋಪಿಗೆ ಕರ್ನಾಟಕ ರಾಜ್ಯ ಸರ್ಕಾರ ಗಲ್ಲು
ಶಿಕ್ಷೆ ಅಥವಾ ಕಠಿಣ ಶಿಕ್ಷೆಗೊಳಪಡಿಸಬೇಕು ಹಾಗೂ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡವುದರ ಜೊತೆಗೆ ಸರ್ಕಾರಿ ನೌಕರಿ ಒದಗಿಸ ಬೇಕು ಎಂದು ಕೋಲಿ ಕಬ್ಬಲಿಗ ಸಮಾಜದ ಕೊಪ್ಪಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣಪ್ಪ ಕಾಯಿ ಗಡ್ಡಿ ಹಾಗೂ ನಮ್ಮ ನಾಡ ರಕ್ಷಣಾ ವೇದಿಕೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಶರಣಪ್ಪ ಸಂಗಟಿ, ಹಾಗೂ ತಾಲೂಕ ಪದಾಧಿಕಾರಿಗಳಾದ ಕನಕ ದ್ರುವ,ಹಿತೇಶ್ ಕುಮಾರ್ ಒತ್ತಾಯಿಸಿದ್ದಾರೆ.