BREAKING : ಮಳೆಯ ಅಬ್ಬರಕ್ಕೆ ಜನ ತತ್ತರ : ಇನ್ನೂ 2 ದಿನ ಭಾರೀ ಮಳೆ!!

You are currently viewing BREAKING : ಮಳೆಯ ಅಬ್ಬರಕ್ಕೆ ಜನ ತತ್ತರ : ಇನ್ನೂ 2 ದಿನ ಭಾರೀ ಮಳೆ!!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ 2 ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಮಾಹಿತಿ ನೀಡಿದೆ. ನಗರದ ದೇವನಹಳ್ಳಿ ಸುತ್ತಮುತ್ತಾ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಸುತ್ತಮುತ್ತಲೂ ಸತತ 1 ಗಂಟೆಗಳ ಕಾಲ ಬಿರುಗಾಳಿ ಸಹಿತ ಮಳೆಯಾಗಿದೆ.

ಇಂದು ರಾಜ್ಯದ 9 ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ನಗರದ ಕೆಂಪೇಗೌಡ ಸರ್ಕಲ್ ಬಳಿ 4 ಅಡಿಗೂ ಹೆಚ್ಚು ನೀರು ನಿಂತಿದ್ದು, ಗೂಡ್ಸ್, ಆಟೋ, ಬೈಕ್ ಮಳೆ ನೀರಲ್ಲೇ ನಿಂತುಕೊಂಡಿತ್ತು, ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಣದೆ ವಾಹನಗಳು ನಿಂತಲ್ಲೇ ನಿಂತಿದೆ. ವಾಹನ ಚಾಲಕರು ಪರದಾಡಿದ್ದು, ಬಿರುಗಾಳಿಗೆ ಬ್ಯಾರಿಕೇಡ್ ಒಂದು ನೆಲಕ್ಕುರುಳಿದ್ದು, ಸಂಚಾರ ಅಸ್ತವ್ಯಸ್ತವಾಗಿತ್ತು.

Leave a Reply

error: Content is protected !!