BIG NEWS : ‘ರೆಮಲ್’ ಸೈಕ್ಲೋನ್ ಆರ್ಭಟ : ಅಧಿಕಾರಿಗಳ ಜೊತೆ PM ಮೋದಿ ಸಮಾಲೋಚನೆ!

You are currently viewing BIG NEWS : ‘ರೆಮಲ್’ ಸೈಕ್ಲೋನ್ ಆರ್ಭಟ : ಅಧಿಕಾರಿಗಳ ಜೊತೆ PM ಮೋದಿ ಸಮಾಲೋಚನೆ!

ದೆಹಲಿ : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ರೆಮಲ್’ (Remal) ಚಂಡಮಾರುತ ಇಂದು ಪಶ್ಚಿಮ ಬಂಗಾಳ ಸೇರಿ ಕೇಲವೂ ಈಶಾನ್ಯ ರಾಜ್ಯಗಳ ಕರಾವಳಿ ತೀರಗಳಿಗೆ ಬರಲಿದೆ. ‘ರೆಮಲ್’ ಸೈಕ್ಲೋನ್ ಆರ್ಭಟಕ್ಕೆ ಬ್ರೇಕ್ ಹಾಕಲು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಂಫೂರ್ಣ ಸನ್ನದ್ಧವಾಗಿದೆ ಎಂದು ಊಹಿಸಲಾಗಿದೆ.

ಇದಕ್ಕೆ ಪು‍ಷ್ಟಿ ನೀಡುವಂತೆ ಇಂದು ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ರೆಮಲ್ ಚಂಡಮಾರುತದ ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಕ್ಷಣಾ ಪಡೆ ಮಾಡಿಕೊಂಡಿರುವ ಸಿದ್ದತೆ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

‘ರೆಮಲ್’ ಚಂಡಮಾರುತ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ಮಾಡಿರುವ ಪ್ರಧಾನಿ ಮೋದಿ, ರಾಜ್ಯಗಳು, ಕೇಂದ್ರ ಸಚಿವಾಲಯಗಳು ರೆಮಲ್ ಚಂಡಮಾರುತವನ್ನು ಎದುರಿಸಲು ಯಾವೆಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು, ವಿದ್ಯುತ್, ದೂರಸಂಪರ್ಕ, ಆರೋಗ್ಯ, ಕುಡಿಯುವ ನೀರು ಮುಂತಾದ ಎಲ್ಲಾ ಅಗತ್ಯ ಸೇವೆಗಳನ್ನು ಯಾವುದೇ ಅಡಚಣೆಯ ಸಂದರ್ಭದಲ್ಲಿ ತಕ್ಷಣವೇ ನೀಡುವಂತೆ ಬರುತ್ತವೆ ಸೂಚನೆ ನೀಡಿದ್ದಾರೆ. ಅಗತ್ಯ ಔಷಧಗಳು ಸಂಗ್ರಹಣೆ ಸೇರಿದಂತೆ ನಿಯಂತ್ರಣ ಕೊಠಡಿಗಳು 24X7 ಕಾರ್ಯನಿರ್ವಹಿಸುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ.

Leave a Reply

error: Content is protected !!