Celebration : ಮೋದಿ ಪದಗ್ರಹಣ, ಸಂಭ್ರಮಾಚರಣೆ

You are currently viewing Celebration : ಮೋದಿ ಪದಗ್ರಹಣ, ಸಂಭ್ರಮಾಚರಣೆ

ಕುಕನೂರ :    ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಂಜುನಾಥ ನಾಡಗೌಡರ ಮಾತನಾಡಿ ಇಡೀ ದೇಶವೇ ಮೆಚ್ಚಿದ ನಾಯಕ ಈಗ ಮತ್ತೊಮ್ಮೆ ಪ್ರಧಾನಿಯಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇವರ ಅಧಿಕಾರ ಅವಧಿಯಲ್ಲಿ ಭಾರತ ದೇಶವು ವಿಶ್ವಮಟ್ಟದಲ್ಲಿ ಭಾರಿ ಮನ್ನಣೆಯನ್ನು ಪಡೆದಿದ್ದು ಜಗತ್ತಿಗೆ ವಿಶ್ವ ಗುರುವಾಗುವ ಸಮಯ ಇದೀಗ ಕೂಡಿ ಬಂದಿದೆ. ಮತ್ತೆ 3ನೇ ಬಾರಿಗೆ ಪ್ರಧಾನಿಯಾಗುವ ಮೂಲಕ ದೇಶವನ್ನು ಆಳಿದ ನೆಹರು ಅವರ ದಾಖಲೆಯನ್ನು ಮರುಕಳಿಸಿದ್ದಾರೆ ಎಂದರು.
ನಂತರ ಭಾಜಪದ ತಾಲೂಕ ಆಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ ಬಿಜೆಪಿ ಪಕ್ಷ ಕೇವಲ ಒಂದು ರಾಜಕೀಯ ಪಕ್ಷವಲ್ಲ, ಇದು ದೇಶದ ಸುಭದ್ರತೆಯನ್ನು ಕಾಪಾಡುವ ಪಕ್ಷವಾಗಿದೆ ಎಂದರು.
ಬಳಿಕ ಬಿಜೆಪಿಯ ಮುಖಂಡರಾದ ಶಿವಕುಮಾರ ನಾಗಲಾ ಪೂರಮಠ, ಕರಬಸಯ್ಯ ಬಿನ್ನಾಳ, ಮಾತನಾಡಿದರು.
ಈ ಸಂಧರ್ಭದಲ್ಲಿ ಪ್ರಮುಖರಾದ ಶಂಭಣ್ಣ ಯಲಬುರ್ಗಾ, ರಾಜಶೇಖರ ದ್ಯಾಂಪೂರು, ಶಿವರಾಜ ಯಲ್ಲಪ್ಪಗೌಡರ, ವಿನಯ ಸರಗಣಾಚಾರ, ಮಂಜು ಸರಗಣಚಾರ, ಮಂಜು ಚನಪನಹಳ್ಳಿ, ಶ್ರೀಧರ್, ತೋಟಯ್ಯ ಶಶಿಮಠ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

Leave a Reply

error: Content is protected !!