ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಭಿನ್ನ ತಿರುವುಗಳನ್ನು ಪಡೆಯುತ್ತಿದ್ದು ಬಂಧಿತ ಆರೋಪಿಗಳು ಈಗ ಇನ್ನೊಂದು ವಿಷಯ ಬಾಯಿ ಬಿಟ್ಟಿದ್ದು ಅದು ದೇಹ ವಿಲೇವಾರಿಗೆ ಮಾತ್ರ ಸುಪಾರಿ ಪಡೆದಿದ್ದೆವು ಎಂದಿದ್ದಾರೆ.
ಡೀಲ್ ಪಡೆದಿದ್ದ ನಾವು ದುಡ್ಡು ಪಡೆದಿರಲಿಲ್ಲ. ಕೇವಲ ಮಾತುಕತೆಯಾಗಿ ಡೀಲ್ ಮಾತ್ರ ಆಗಿತ್ತು. ನಮಗೆ ಕೊಲೆ ಮಾಡಲು ಹೇಳಿರಲಿಲ್ಲ. ಬದಲಿಗೆ ಆತ ಮೃತಪಟ್ಟ ಮೇಲೆ ದೇಹವನ್ನು ವಿಲೇವಾರಿ ಮಾಡಲು ಡೀಲ್ ಆಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಟ ದರ್ಶನ್ 30ಲಕ್ಷ ಸುಪಾರಿಗೆ ಡೀಲ್ ಕೊಟ್ಟರು ಎಂದು ಹೇಳಿಕೆ ಕೊಟ್ಟಿದ್ದಾರೆ.
ವರದಿ : ಉಲ್ಲಾಸ್ ಬಸವರಾಜು, ಬೆಂಗಳೂರು