ಯಲಬುರ್ಗಾ-ಕುಕನೂರು : 2024-25ನೇ ಸಾಲಿಗಾಗಿ ಯಲಬುರ್ಗಾ ಹಾಗೂ ಕುಕನೂರ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ / ಮೆಟ್ರಿಕ್ ನಂತರದ ಬಾಲಕ / ಬಾಲಕಿಯರ ವಸತಿ ನಿಲಯಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ನಿರ್ದೇಶಕರು, (ಗ್ರೇಡ್-2) ಸಮಾಜ ಕಲ್ಯಾಣ ಇಲಾಖೆ, ಯಲಬುರ್ಗಾ- ಕುಕನೂರು ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08534-220426 ಸಂಪರ್ಕಿಸಿ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ವೆಬ್ ಸೈಟ್ www.sw.kar.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಈ ಕೆಳಕಂಡ ದಾಖಲಾತಿಗಳನ್ನು ಈ ಕಾರ್ಯಲಯಕ್ಕೆ ಸಲ್ಲಿಸಲು ತಿಳಿಸಿದ್ದಾರೆ.
ಅಗತ್ಯವಾಗಿ ಬೇಕಾಗಿರುವ ದಾಖಲಾತಿಗಳು
1)ಆನ್‌ಲೈನ್ ಅರ್ಜಿಯ ಪ್ರತಿ.
2)ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದೃಢೀಕೃತ ಝರಾಕ್ಷ ಪ್ರತಿ.
3)ಹಿಂದಿನ ತರಗತಿಯ ಅಂಕಪಟ್ಟಿಯ ದೃಢೀಕೃತ ಝರಾಕ್ಸ್ ಪ್ರತಿ.
4)ವಿದ್ಯಾರ್ಥಿ ಮತ್ತು ಪೋಷಕರ ಆಧಾರ ಕಾರ್ಡ್ ಝರಾಕ್ಸ್ ಪ್ರತಿ.
5)ವಿದ್ಯಾರ್ಥಿಯ ಪಾಸ್ ಫೋಟೋ ಸೈಜ್‌ನ 04 ಫೋಟೋ.
*ಅವಳಿ ತಾಲೂಕಿನ ವಸತಿ ನಿಲಯಗಳ ವಿವರ ಹಿಗಿದೆ*
