ಕುಕನೂರು : ಶಾಲೆಯ ಆವರಣದ ಅಡಿವಿ ಔಡಲ ಕಾಯಿಯನ್ನು ತಿಂದು ಸುಮಾರು 45 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ನಡೆದಿದ್ದು, ಕುಕನೂರು ತಾಲೂಕಿನ ಕೋನಾಪುರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂದು ಮಾಹಿತಿ ಲಭ್ಯ ವಾಗಿದೆ. ಅಸ್ವಸ್ಥಗೊಂಡ ಮಕ್ಕಳನ್ನು ಹತ್ತಿರದ ತಾಲೂಕಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಯ ಒಟ್ಟು 72 ಮಕ್ಕಳಲ್ಲಿ ಬರೋಬ್ಬರಿ 45 ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲಿ ಮೂವರು ಮಕ್ಕಳಿಗೆ ಗಂಭೀರ ಸ್ಥಿತಿ ಕಂಡ ಕಾರಣ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ಇದೆ.
ಇದೆ ಸಂದರ್ಭದಲ್ಲಿ ತಹಶೀಲ್ದಾರ ಎಚ್ ಪ್ರಾಣೇಶ. ಉಪ ತಹಶೀಲ್ದಾರ ಮುರಳೀಧರ ರಾವ್, ಅಕ್ಷರದಾಸೋಹ ಉಪ ನಿರ್ದೇಶಕ ಎಫ್ ಎಂ ಕಳ್ಳಿ. ಶಾಲಾ ಶಿಕ್ಷಕರು ಆಸ್ಪತ್ರೆ ಯಲ್ಲಿಯೇ ಇದ್ದರು.