JOB OFFER : ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌ : ʻKSRTCʼಯಲ್ಲಿ 3553 ಹುದ್ದೆಗಳ ನೇಮಕಾತಿ

You are currently viewing JOB OFFER : ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌ : ʻKSRTCʼಯಲ್ಲಿ 3553 ಹುದ್ದೆಗಳ ನೇಮಕಾತಿ

ಪ್ರಜಾ ವೀಕ್ಞಣೆ ಸುದ್ದಿಜಾಲ :-

ರಾಜ್ಯದ ನೀರುದ್ಯೋಗಿ ಯುವಕ-ಯುವತಿಯರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೆಎಸ್‌ಆರ್‌ಟಿಸಿ ಚಾಲಕ, ಅಪ್ರೆಂಟಿಸ್ ಟ್ರೈನಿಗಳು, ಎಸ್‌ಡಿಎ, ಕಚೇರಿ ಸಹಾಯಕ ಸೇರಿದಂತೆ ಒಟ್ಟು 3553 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

-:ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ:-

ಸಂಸ್ಥೆ ಹೆಸರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC)

ಒಟ್ಟು ಹುದ್ದೆ: 3553

ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆ ದಿನಾಂಕ ಶೀಘ್ರವೇ ಪ್ರಕಟವಾಗಲಿದೆ.

ಅಧಿಕೃತ ವೆಬ್‌ಸೈಟ್ : ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ https://ksrtc.in/

ವಯೋಮಿತಿ : ಕೆಎಸ್‌ಆರ್‌ಟಿಸಿ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯೋಮಿತಿಯನ್ನು 18 ವರ್ಷದಿಂದ ಗರಿಷ್ಠ 40 ವರ್ಷಗಳವರೆಗೆ ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಪೈಕಿ ಸಾಮಾನ್ಯ 2A, 2B, 3A ಮತ್ತು 3B ಅವರಿಗೆ ರೂ. 500 ನಿಗದಿಪಡಿಸಲಾಗಿದೆ. ಇತರ ವರ್ಗದ ಅಭ್ಯರ್ಥಿಗಳಿಗೆ ಇತರರಿಗೆ ರೂ. 250 ನಗದಿ ಮಾಡಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಿದೆ.

ಶೈಕ್ಷಣಿಕ ಅರ್ಹತೆ : ಅರ್ಜಿ ಸಲ್ಲಿಸಲು ಇಷ್ಟವಿರುವ ಅರ್ಹ ಅಭ್ಯರ್ಥಿಗಳು 10 ನೇ ತರಗತಿ ಮತ್ತು ಮಾನ್ಯ ಡ್ರೈವಿಂಗ್ ಲೈಸೆನ್ಸ್ ಅಥವಾ ಪದವಿಯನ್ನು ಹೊಂದಿರಬೇಕು ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

Leave a Reply

error: Content is protected !!