ಕುಕನೂರು :ತಾಲೂಕಿನ ತಳಕಲ್ಲು ಗ್ರಾಮದಲ್ಲಿ ನೂತನ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಿದ್ದು ಇಂದು ಅಧಿಕೃತವಾಗಿ ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ್ ರಾಯರಡ್ಡಿ ಅವರಿಂದ ಉದ್ಘಾಟನೆಗೊಂಡಿತು.
ಕೊಪ್ಪಳ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಮಧು ಬಂಗಾರಪ್ಪನವರು ಇಂದು ಯಲಬುರ್ಗಾ ವಿಧಾನಸಭೆಯ ತಡಕಲ್ ಗ್ರಾಮಕ್ಕೆ ಆಗಮಿಸಿ, ತಳಕಲ್ ಗ್ರಾಮದಲ್ಲಿ ನೂತನ ಹೆರಿಗೆ ಆಸ್ಪತ್ರೆ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಂ ಎಲ್ ಸಿ ಹೇಮಲತಾ ನಾಯಕ್, ಜಿಲ್ಲಾ ಅರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಟಿ ಲಿಂಗರಾಜು ಉಪಸ್ಥಿತರಿದ್ದರು.